2:43 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಗುಂಡಿ ತುಂಬಿರುವ ರಸ್ತೆಗಳು; ಕುಂಭಕರ್ಣನ ನಿದ್ರೆಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳು !!

04/12/2021, 12:37

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ರಸ್ತೆ, ಅಬ್ದುಲ್ ಕಲಾಂ ವೃತ್ತದವರೆಗೂ ಬಾರಿ ಗುಂಡಿಗಳಿಂದ ಹಾಗೂ   ಧೂಳಿನಿಂದ ತುಂಬಿ ಹೋಗಿದೆ. ದಿನ ನಿತ್ಯ ಹಳ್ಳಿಗಳಿಂದ ಜನರು ಇದೇ ರಸ್ತೆಯಲ್ಲಿ ಸಂಚರಿಸುವ ಮೂಲಕ ಪ್ರತಿದಿನ ನಿತ್ಯ ನರಕ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುವ ಮೈನ್ಸ್ ಲಾರಿಗಳ ಹಾವಳಿಯಿಂದ ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ. ರಸ್ತೆಯ ಅಕ್ಕ ಪಕ್ಕದ ಮನೆಯವರ ಗೋಳು ಹೇಳತೀರದು, ಪಟ್ಟಣ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.  ತಹಶೀಲ್ದಾರ್ ಮತ್ತು ಉಪ ನೊಂದಣಿ ಕಚೇರಿಗೆ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸಬೇಕು. ಆದರೆ ಯಾರೊಬ್ಬರೂ ಈ ರಸ್ತೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ  ತಾಲೂಕು ಕೇಂದ್ರ ಕೂಡ್ಲಿಗಿಯಲ್ಲೇ ರಸ್ತೆಗಳು ಈ ದುಸ್ಥಿತಿಯಲ್ಲಿದೆ.

ಇನ್ನೂ ಕೆಲವು ಹಳ್ಳಿಗಳ ರಸ್ತೆಗಳ ದುಸ್ಥಿತಿ  ಹೇಳಿ

ತೀರದು.

ಶಾಸಕರು ಇತ್ತ ಕಡೆ ಗಮನಹರಿಸಿ ಅಪಘಾತಕ್ಕೆ ಬಾಯಿತೆರೆದು ಕಾಯುತ್ತಿರುವ ಗುಂಡಿಗಳಿಂದ ಕೂಡಿದ ಈ  ರಸ್ತೆಯಗಳನ್ನು ದುರಸ್ಥೆಗೊಳಿಸಲು ಕ್ರಮ ಜರುಗಿಸಬೇಕಿದೆ ಹೊಸಪೇಟೆ ಹಾಗೂ ಬೆಂಗಳೂರು ರಸ್ತೆಗಳನ್ನ ಅತೀ ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಿ ಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಮತ್ತು  ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಮೂಲಕ ಒತ್ತಾಯಿಸಿದ್ದಾರೆ.

ನಿರ್ಲಕ್ಷ್ಯ ತೋರಿದ್ದಲ್ಲಿ ಪ್ರತಿಭಟನೆ: ಪಟ್ಟಣದ ಹೊಸಪೇಟೆ ರಸ್ತೆ  ಹಾಗೂ ಬೆಂಗಳೂರು ರಸ್ತೆಗಳು ಮೊಳದಗಲ ತೆಗ್ಗುಬಿದ್ದಿದ್ದು, ಎರಡೂ ಪ್ರಮುಖ ರಸ್ತೆ

ಗಳು ಒಂದು ಕೀಲೋಮೀಟರ್ ನಷ್ಟು ನೂರಾರು ತೆಗ್ಗುಗಳಿವೆ. ಪಾದಾಚಾರಿಗಳು ವಾಲಾಡತ್ತ ನಡೆದಾಡಬೇಕಿದೆ. ಬೈಕ್ ಸವಾರರು ಸರ್ಕಸ್ ಮಾಡಬೇಕಿದೆ. ಆರೇಳು ತಿಂಗಳು ಗಳಿಂದ ತೆಗ್ಗು ಬಿದ್ದಿದ್ದು ನಿತ್ಯವೂ ಬೈಕ್  ಸವಾರರು ಬಿದ್ದು ನೋವು ಅನುಭವಿಸುತ್ತಿದ್ದಾರೆ. ಬೆಂಗಳೂರು ಹಾಗೂ ಹೊಸಪೇಟೆ ರಸ್ತೆಗಳು ಅತಿಹೆಚ್ಚು ಸಾರ್ವಜನಿಕರು ವಾಹನ ಸವಾನರರು ಸಂಚರಿಸುತ್ತಿದ್ದು, ತಹಶಿಲ್ದಾರರು ಹಾಗೂ ಅಧಿಕಾರಿಗಳು ಹಾಗೂ ತಾಲೂಕಿನ ಬಹುತೇಕ  ಅತಿಹೆಚ್ಚು ಸಂಚರಿಸುತ್ತಾರೆ. ತಾಲೂಕು ಕೇಂದ್ರವಾಗಿದ್ದರೂ ಆರೇಳು ತಿಂಗಳಿಂದಲೂ ರಸ್ತೆ ದುರಸ್ತಿ ಮಾಡುತ್ತಿಲ್ಲ, ಇದು ತಹಶೀಲ್ದಾರರ ಹಾಗೂ ಅಧಿಕಾರಿಗಳ ಜನಪ್ರತಿನಿಧಿಗಳ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡ್ಲಿಗಿ ತಾಲೂಕು ವಕೀಲರ ಸಂಘ ಸಂಬಂಧಿಸಿದ ಇಲಖಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ್ದಾರೆ. ವಾರದೊಳಗಾಗಿ ಪಟ್ಟಣದ ಎರಡೂ ರಸ್ತೆಗಳನ್ನು ದುರಸ್ತಿಗೊಳಿಸಬೇಕಿದೆ. ಮಣ್ಣಾಕಿಗುಂಡಿ ತುಂಬುವ ಬದಲು ಸಂಪೂರ್ಣ ಕಿತ್ತು ಹೊಸದಾಗಿ ರಸ್ಥೆ ಮಾಡಬೇಕು, ನಿರ್ಲಕ್ಷ್ಯ ತೋರಿದ್ದಲ್ಲಿ ಸಾರ್ವಜನಿಕ ಹಿತಸಕ್ತಿಯ ಮೇರೆಗೆ ಕಾನೂನು ಸಮರ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ. ತಾಲೂಕಾಡಳಿತದ ವೈಫಲ್ಯ ಖಂಡಿಸಿ ವಿವಿಧ

ಸಂಘಟನೆಗಳ ಸಹಯೋಗದಲ್ಲಿ, ಪ್ರತಿಭಟನೆ ಮಾಡಲಾಗುವುದೆಂದು ವಕೀಲರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಜಿ.ಹೊನ್ನೂರಪ್ಪ ನೇತೃತ್ವದಲ್ಲಿ  ಹೇಳಿಕೆ ನೀಡಿ ಎಚ್ಚರಿಸಿದ್ದಾರೆ. ವಕೀಲರಾದ ಕೊಟ್ರಗೌಡ್ರು, ಮಲ್ಲಿಕಾರ್ಜುನಸ್ವಾಮಿ, ಸಾಸಲವಾಡ ನಾಗರಾಜ,ವಿರುಪಾಪುರ ವೆಂಕಟೇಶ,ಹಾಲೂರು ಬಸವರಾಜ ಸೇರಿದಂತೆ ಮತ್ತಿತರ ವಕೀಲರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು