ಇತ್ತೀಚಿನ ಸುದ್ದಿ
ಕೊಣಾಜೆ ಪೊಲೀಸರ ಭಾರೀ ಕಾರ್ಯಾಚರಣೆ: 3 ಲಕ್ಷ ರೂ. ಮೌಲ್ಯದ ಗಾಂಜಾ ವಶ; 4 ಮಂದಿ ಬಂಧನ
26/12/2022, 21:54

ಮಂಗಳೂರು(reporterkarnataka.com): ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಸುಮಾರು 3 ಲಕ್ಷ ಮೌಲ್ಯದ ಗಾಂಜಾವನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದು,
ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಕೊಣಾಜೆ ಪೊಲೀಸರು ಚೇಳೂರು ಚೆಕ್ ಪೋಸ್ಟ್ ನಲ್ಲಿ ಅಡ್ಡಗಟ್ಟಿ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಸರಗೋಡು ಬಂದ್ಯೋಡಿನ ಮಹಮ್ಮದ್ ನೌಫಾಲ್ (24), ಮಲಪುರಂ ಪೊನ್ನಾಣಿಯ ಜಂಶೀರ್ ಎಂ.(27), ಮಂಜೇಶ್ವರ ಮಂಗಲ್ಪಾಡಿಯ ಮಹಮ್ಮದ್ ಬಾತೀಶ್ (37) ಹಾಗೂ ಕಾಸರಗೋಡು ಮುಟ್ಟತೋಡಿ ಮಹಮ್ಮದ್ ಅಶ್ರಫ್ (42) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ ಉಪ್ಪಿನಂಗಡಿ, ಮೆಲ್ಕಾರ್, ಬೋಳಿಯಾರು ಮಾರ್ಗವಾಗಿ ಕೇರಳ ಕಡೆಗೆ ಕಾರಿನಲ್ಲಿ ಮಾದಕ ವಸ್ತು ಮತ್ತು ಮಾದಕ ದ್ರವ್ಯವನ್ನು ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದುಕೊಂಡು ಚೇಳೂರು ಪೊಲೀಸ್ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ.
3,19,000 ಬೆಲೆಬಾಳುವ 32,195 ಕೆ.ಜಿ ಗಾಂಜಾ, ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಮತ್ತು ಖರೀದಿಸಲು ಉಪಯೋಗಿಸಿದ ರೂ.13,000 ಮೌಲ್ಯದ 4 ಮೊಬೈಲ್ ಫೋನ್ ಹಾಗೂ ಗಾಂಜಾ ತುಂಬಿಕೊಂಡು ಬರಲು ಬಳಸಿದ ಎರಡು ಟ್ರಾವೆಲ್ ಬ್ಯಾಗ್ ಸೇರಿದಂತೆ ರೂ.3 ಲಕ್ಷ ಮೌಲ್ಯದ ಆಲ್ಟ್ ಕಾರು ಒಟ್ಟು ರೂ.6,32,000 ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪಿ.ಎಸ್ ಐ ಶರಣಪ್ಪ ಭಂಡಾರಿ, ಸಿಬ್ಬಂದಿ ಶೈಲೇಂದ್ರ, ಮಹಮ್ಮದ್ ಶರೀಫ್, ಮಹಮ್ಮದ್ ಶರೀಫ್, ಮಹೇಶ್, ಪುರುಷೋತ್ತಮ, ದೀಪಕ್, ಅಶ್ವಿನ್, ಸುರೇಶ್, ಅಂಬರೀಶ್, ಬರಮ್ ಬಡಿಗೇರ್, ರೇಷ್ಮಾ, ಸುನಿತಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳೆಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.