11:13 PM Friday9 - May 2025
ಬ್ರೇಕಿಂಗ್ ನ್ಯೂಸ್
Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಕೊಂಪದವು: ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ- 2023

24/04/2023, 15:26

ಮಂಗಳೂರು(reporterkarnataka.com): ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ -2023 ಕಾರ್ಯಕ್ರಮ
ಕೊಂಪದವು ಸೋಮನಾಥೇಶ್ವರ ಗುಹಾಲಯ ಕ್ಷೇತ್ರದ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ಅದ್ದೂರಿಯಲ್ಲಿ ನೆರವೇರಿತು.
ವೈಷ್ಣವಿ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಗರಿ ಎಂಟರ್ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್, ಮುಖ್ಯ ಅತಿಥಿಗಳಾಗಿ ಎನ್ ವೆಂಕಟರಾಜ ಭಟ್ (ಮುಖ್ಯಸ್ಥರು ವ್ಯವಸ್ಥಾಪನ ಸಮಿತಿ ನೆಲ್ಲಿ ತೀರ್ಥ ಗುಹಾಲಯ ದೇವಸ್ಥಾನ), ಆನಂದ ಕಾವ (ಪ್ರಗತಿಪರ ಕೃಷಿಕರು), ಡಾ. ಶೇಖರ ಅಜೆಕಾರು (ಮುಖ್ಯಸ್ಥರು ಬೆಳದಿಂಗಳ ಸಾಹಿತ್ಯ ಸಮ್ಮೇಳನ), ಡಾ. ರಾಜೇಶ್ ಭಟ್ ಮಂದಾರ (ಪತ್ರಕರ್ತರು ಹಾಗೂ ಮಾಧ್ಯಮ ನಿರೂಪಕರು), ಆಗಮಿಸಿದ್ದರು. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಾಸ್ತಾವಿಕ ಮಾತುಗಳಾಡಿದರು, ವೇದಿಕೆಯಲ್ಲಿ ಮಜಾ ಭಾರತ ಖ್ಯಾತಿಯ ಚಲನಚಿತ್ರ ನಟಿ ಆರಾಧನಾ ಭಟ್ ಉಪಸ್ಥಿತರಿದ್ದರು.


ಪ್ರಾಸ್ತಾವಿಕ ಮಾತನಾಡಿದ ಪದ್ಮಶ್ರೀ ಭಟ್ ಅವರು, ಯಾವುದೇ ವೈಯಕ್ತಿಕ ಆಸೆ ಆಕಾಂಕ್ಷಿಗಳು ಇಲ್ಲದೆ ಕೇವಲ ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಸಂಸ್ಥೆ ಅಂದು ಆರಂಭಗೊಂಡು, ಇಂದು ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆಲ್ಲ ಸದೃದಯಿ, ಸಮಾನಮನಸ್ಕ ಸಮಾಜ ಬಾಂಧವರು ಕಾರಣ. ನಿಮ್ಮ ಪ್ರೋತ್ಸಾಹ ಸದಾ ನಮ್ಮೊಂದಿಗಿರಲಿ, ನಮ್ಮ ಈ ತಂಡ ಸಮಾಜಮುಖಿ ಕೆಲಸಗಳಲ್ಲಿ ನಿಮ್ಮೊಂದಿಗೆ ಬೆರೆಯಲು ಸಂತೋಷಪಡುತ್ತಿದೆ, ಸಮಾಜ ಬಾಂಧವರ ಸಹಕಾರವನ್ನು ಮುಂದೆಯೂ ನಿರೀಕ್ಷಿಸುತ್ತೇವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ರಾಜೇಶ್ ಭಟ್ ಮಂದಾರ ಮಾತನಾಡಿ, ವಾಯ್ಸ್ ಆಫ್ ಆರಾಧನಾ ಮತ್ತು ಆರದಿರಲಿ ಬದುಕು ಇದು ಒಂದೇ ನಾಣ್ಯದ ಎರಡು ಮುಖಗಳು. ವಾಯ್ಸ್ ಆಫ್ ಆರಾಧನಾ ಸಾಂಸ್ಕೃತಿಕ, ಸಾಹಿತ್ಯ ಪೂರಕ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿದೆ. ಅಂತೆಯೇ ಆರದಿರಲಿ ಬದುಕು ಅಶಕ್ತರ, ಅನಾರೋಗ್ಯ ಪೀಡಿತರ ಆಶಾಕಿರಣವಾಗಿದೆ. ಹೊರ ಜಗತ್ತಿನ ಯಾರ ಮುಂದೆಯೂ ಕೈಚಾಚದೆ, ತನ್ನ ತಂಡದ ಸದಸ್ಯರ ಬೆಂಬಲಿತ ದೇಣಿಗೆಯಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ನೀಡುತ್ತಾ ಬಂದದ್ದು, ಇದು ಬಡವರ ವೈದ್ಯಕೀಯಕ್ಕೆ ಸಹಕಾರಿಯಾಗಿದೆ ಎಂದರು.
ಅತಿಥಿ ಡಾ. ಶೇಖರ ಅಜಕಾರು ಮಾತನಾಡಿ, ತನ್ನ ಮತ್ತು ವಾಯ್ಸ್ ಆಫ್ ಆರಾಧನಾ ತಂಡದ ಹಲವು ವರ್ಷಗಳ ಸ್ನೇಹ ಸಂಪರ್ಕವನ್ನು ನೆನಪಿಸಿಕೊಂಡು, ಪರಸ್ಪರ ಮಾರ್ಗದರ್ಶನ ಮತ್ತು ಸಹಕಾರವನ್ನು ನೆನಪಿಸಿಕೊಂಡರು
ಸಭಾ ಕಾರ್ಯಕ್ರಮದ ಅಧ್ಯಕ್ಷ ಅಗರಿ ರಾಘವೇಂದ್ರ ರಾವ್ ಮಾತನಾಡಿ, ವಾಯ್ಸ್ ಆಫ್ ಆರಾಧನಾ ತಂಡದ ಕಾರ್ಯಕ್ರಮಗಳಿಂದಾಗಿ ತನ್ನ ಶಾಲಾ ಕಾಲೇಜು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾನು ಭಾಗವಹಿಸುತ್ತಿದ್ದ ಬಗ್ಗೆ ನೆನಪಿಸಿಕೊಂಡರು.
ಎನ್. ವೆಂಕಟರಾಜು ಭಟ್ ಅವರು ಕಾರ್ಯಕ್ರಮದ ಔಚಿತ್ಯ, ಗುಹಾಲಯ ಕ್ಷೇತ್ರದ ವಿವರ ಹಾಗೂ ಸ್ವಾಗತ ನೀಡಿದರು.
ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ತನುಶ್ರೀ ಅವರನ್ನು ಸನ್ಮಾನಿಸಲಾಯಿತು. ಮಹತಿ ಪವನಸ್ಕರ್ ಅವರ ಭರತನಾಟ್ಯ ಅದ್ಭುತವೆನಿಸಿತು, ಒಟ್ಟು 49 ಪ್ರತಿಭೆಗಳು ನೋಡುಗರ ಮನಸೂರೆ ಗೊಳ್ಳುವಂತೆ ಕಾರ್ಯಕ್ರಮ ನೀಡಿದರು.
ಅಭಿಷೇಕ್ ಶೆಟ್ಟಿ ಐಕಳ, ದಿನ್ ರಾಜ್,, ಬಸವರಾಜ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್, ಭಾಸ್ಕರ ದೇವಾಡಿಗ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಿರಣ್ ಶೆಟ್ಟಿ ಹಾಗೂ ಶ್ರೇಯ ಎಂಜಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು