ಇತ್ತೀಚಿನ ಸುದ್ದಿ
ಕೊಳ್ತಮಜಲ್: ಕಿಂಡಿ ಅಣೆಕಟ್ಟಿಗೆ ಮಳೆ ನೀರು ಕೊಯ್ಲು ಯೋಜನೆಯಡಿ ಒಂದು ದಿನದ ಶ್ರಮದಾನ
22/12/2022, 13:05
ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜು ರಾಷ್ಟೀಯ ಸೇವಾ ಯೋಜನಾ ಘಟಕ ವತಿಯಿಂದ ಇತ್ತೀಚೆಗೆ ಕೊಳ್ತಮಜಲ್ ಸಾನಕಟ್ಟೆ ಕಿಂಡಿ ಅಣೆಕಟ್ಟಿಗೆ ಮಳೆ ನೀರು ಕೊಯ್ಲು ಯೋಜನೆಯಡಿ ಒಂದು ದಿನದ ಶ್ರಮದಾನ ಕಾರ್ಯಕ್ರಮ ಮಾಡಲಾಯಿತು.
20 ಮಂದಿ ಸ್ವಯಂಸೇವಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟೀಯ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಭೇಟಿ ಸ್ಥಳಕ್ಕೆ ಭೇಟಿ ನೀಡಿ ಸ್ವಯಂಸೇವಕರ ಶ್ರಮದಾನವನ್ನು ಪರಿಶೀಲಿಸಿ ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ.ಲತಾ ಫೆರ್ನಾಂಡಿಸ್ ., ರಾಷ್ಟೀಯ ಸೇವಾ ಯೋಜನಾಧಿಕಾರಿ ಕೀರ್ತನ್ ನಾಯ್ಕ್ ಭಾಗವಹಿಸಿದರು.