ಇತ್ತೀಚಿನ ಸುದ್ದಿ
ಕೊಲ್ನಾಡು: ವೈಜ್ಞಾನಿಕ ಹೈನುಗಾರಿಕೆ; ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ
12/12/2023, 19:54

ಮಂಗಳೂರು(reporterkarnataka.com):ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್- ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಮಂಗಳೂರು ಇದರ ಆಶ್ರಯದಲ್ಲಿ ವಿನಯ ತೆಂಗು ಬೆಳೆಗಾರರ ರೈತ ಉತ್ಪಾದಕ ಕಂಪನಿ ಲಿಮಿಟೆಡ್, ಮುಲ್ಕಿ ಇವರ ಸಹಯೋಗದೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ವಿಷಯದಲ್ಲಿ ಒಂದು ದಿನದ ತರಬೇತಿ ಹಾಗೂ ರೈತರ ಸಾಮರ್ಥ್ಯಭಿವೃದ್ಧಿ ಕಾರ್ಯಕ್ರಮವನ್ನು ಮುಲ್ಕಿ ಸಮೀಪದ
ಕೊಲ್ನಾಡು ಜಂಕ್ಷನ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಡಾ. ಶಿವಕುಮಾರ್, ಆರ್., (ಸಹಾಯಕ ಪ್ರಾದ್ಯಪಕರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು) ಅವರು ಕಾರ್ಯಕ್ರಮದ ಸಂಯೋಜಕರಗಿದ್ದು, ತಮ್ಮ ಪ್ರವಚನದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ಹಾಗೂ ಸಮತೋಲನ ಆಹಾರದ ಮಹತ್ವವನ್ನು ತಿಳಿಸಿದರು. ರೈತರು ತಮ್ಮ ರಾಸುಗಳಿಗೆ ಕೇವಲ ಪಶು ಆಹಾರವನ್ನು ಕೊಡದೆ ಸರಿಯಾದ ಪ್ರಮಾಣದಲ್ಲಿ ಹಸಿರು ಮೇವು, ಒಣ ಮೇವು, ಧಾನ್ಯ ಮಿಶ್ರಣ ಹಾಗೂ ಖನಿಜ ಮಿಶ್ರಣಗಳನ್ನು ಕೊಡುವುದರಿಂದ ಹಾಲಿನಲ್ಲಿ ಕೊಬ್ಬು ಹಾಗೂ ಹಾಲಿನ ಸಾಂದ್ರತೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅಧಿಕ ಹಾಲಿನ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯ ಶೆಟ್ಟಿ, (ಅಧ್ಯಕ್ಷರು, ವಿನಯ ತೆಂಗು ಬೆಳೆಗಾರರ ರೈತ ಉತ್ಪಾದಕ ಕಂಪನಿ ಲಿಮಿಟೆಡ್, ಮುಲ್ಕಿ) ಉಪಸ್ಥಿತರಿದ್ದರು.