ಇತ್ತೀಚಿನ ಸುದ್ದಿ
ಕೊಳಲುವಾದಕನಾಗುವ ಕನಸ್ಸು ಕಂಡಿದ್ದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
01/10/2024, 12:01

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿ ಪಟ್ಟಣದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಕೊಳಲು ನುಡಿಸುವ ಆಸೆ ಹೊಂದಿದ್ದ, ಓದಲು ಇಷ್ಟವಿಲ್ಲದ ಧ್ರುವ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಪಿಜಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧ್ರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವಿದ್ಯಾರ್ಥಿ. ಪೋಷಕರ ಬಳಿ ಓದಲು ಇಷ್ಟವಿಲ್ಲ, ಕೊಳಲು ನುಡಿಸುವ ಕ್ಲಾಸ್ ಗೆ ಹೋಗ್ತೀನಿ ಅಂತಿದ್ದ. 10ನೇ ತರಗತಿ ಮುಗಿಯಲಿ ಆಮೇಲೆ ಹೋಗು ಎಂದಿದ್ದ ಪೋಷಕರು. ಧ್ರುವ ಮಧ್ಯ ವಾರ್ಷಿಕ ಪರೀಕ್ಷೆಗೆ ಬಾರದ ಕಾರಣ ವಿದ್ಯಾರ್ಥಿ ಅಜ್ಜನಿಗೆ ಫೋನ್ ಮಾಡಿದ್ದ ಶಾಲೆ ಮುಖ್ಯಸ್ಥರು ತಿಳಿಸಿದ್ದರು.
ಮೃತ ಬಾಲಕನ ಅಜ್ಜ ಪಿಜಿಗೆ ಬಂದು ನೋಡಿದಾಗ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದ.
ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.