ಇತ್ತೀಚಿನ ಸುದ್ದಿ
Kogre Festival | ಕೊಗ್ರೆ ಮಾಡ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವೈಭವದ ರಥೋತ್ಸವ
09/03/2025, 12:53

ಶಶಿ ಬೆತ್ತದ ಕೊಳಲು
info.reporterkarnataka@gmail.com
ಜಯಪುರ ಸಮೀಪದ ಕೊಗ್ರೆಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವವು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನೇರವೇರಿಸುತ್ತಿದ್ದಂತೆ ಸರತಿ ಸಾಲಿನಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಮುಂದಾದರು.
ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ರಥ ಬೀದಿಯ ಮುಖಾಂತರ ಮಂಗಳವಾದ್ಯದೊಂದಿಗೆ ಅಮ್ಮನವರ ರಥೋತ್ಸವವು ಸಂಜೆ ನೇರವೇರಿತು.
ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ರಥ ಸಾಗುವಾಗ ದೇವಿಯ ಜಯ ಘೋಷಣೆ ಮಾಡುತ್ತ ಭಕ್ತಿ ಭಾವ ಮೆರೆದು ರಥೋತ್ಸವಕ್ಕೆ ಸಾಕ್ಷಿಯಾದರು.