3:30 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೋಗಳಿ ಗ್ರಾಪಂ: ವಸತಿ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ; ನಿರಾಶ್ರಿತೆಯ ಕೂಗು ಕೇಳೋರಿಲ್ಲ!

29/01/2022, 09:37

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ (ಕೊಟ್ಟೂರು)ತಾಲೂಕಿನ,ಕೋಗಳಿ ಗ್ರಾಮ ಪಂಚಾಯ್ತಿಯಲ್ಲಿ ನಿರಾಶ್ರಿತರ  ಕೂಗಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೋಗಳಿ ಗ್ರಾಪಂ ನಲ್ಲಿ ಅಯೋಗ್ಯ ಫಲಾನುಭವಿಗಳಿಗೇ ಮನ್ನಣೆ.. ಯೋಗ್ಯ ಪಲಾನುಭವಿಗಳಿಗಿಲ್ಲ ಮನ್ನಣೆ… ಎಂಬ ಆರೋಪಗಳು ಕೇಳಿ ಬಂದಿವೆ. 

ನಿರಾಶ್ರಿತರು ಸತತ ಏಳೆಂಟು ವರ್ಷಗಳಿಂದಲೂ ಮನವಿ ಮಾಡಿದರೂ ಮನ್ನಣೆ ನೀಡಿಲ್ಲ, ಭಂಡ ಭ್ರಷ್ಟಾಚಾರದ ಸ್ಥಳೀಯ ಆಡಳಿತದ ವಿರುದ್ಧ ರಾಟಕ್ಕಿಳಿದ ದಿಟ್ಟೆ ನೊಂದ ನಿರಾಶ್ರಿತೆ ನಾಗರತ್ನಮ್ಮ ನಿರಂತರ ಸಮರ ಸಾರಿದ್ದಾರೆ. ಇವರ ಹೋರಾಟಕ್ಕೆ ಕೆಲ ಸ್ಥಳೀಯ ಹೋರಾಟಗಾರರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಈವರೆಗೂ ಗ್ರಾಪಂ ನಲ್ಲಿ ಜರುಗಿರುವ ಭ್ರಷ್ಟಾಚಾರದ ಕುರಿತು ಕಾನೂನಾತ್ಮ ಹೋರಾಟಗಳನ್ನು ಮಾಡುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ಲೋಕಾಯುಕ್ತರನ್ನೊಳಗೊಂಡಂತೆ ಇಲ‍ಾಖೆಯ ಉನ್ನತಾಧಿಕಾರಿಗಳ ಆದೇಶಕ್ಕೆ, ಮನ್ನಣೆ ನೀಡಿಲ್ಲ ಎಂಬ ಗಂಭೀರ ಆರೋಪ ಗ್ರಾಪಂ ಅಭಿವೃದ್ಧಿ ಅಧಕಾರಿಯ ಮೇಲಿದೆ. ಕೆಲ ವರ್ಷಗಳಿಂದಲೂ ವಸತಿ ಹಂಚಿಕೆಯಲ್ಲಿ, ಭಾರೀ ಭ್ರಷ್ಟಾಚಾರದ ಜರುಗಿದೆ ಎಂಬ ಆರೋಪದ ದುರ್ವಾಸನೆ ಹಬ್ಬಿದ್ದು, ಸೂಕ್ತ ತನಿಖೆಯಾದರೆ ಸತ್ಯ ಬಯಲಿಗೆ ಬರಲಿದೆ ಎಂದು ಕೆಲ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಈಗ ಆಯ್ಕೆಯಾಗಿರುವ ಪಲಾನುಭವಿಗಳ ಪಟ್ಟಿಯಲ್ಲಿ ಶೇ. 25%ರಷ್ಟು ವಸತಿ ಹೊಂದಿದವರಿದ್ದು, ಯೋಜನೆಗೆ ಅನರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ. ಆದ್ರೆ ಹಲವು ವರ್ಷಗಳಿಂದ ವಸತಿಗಾಗಿ ಮನವಿ ಮಾಡಿರೋ ವಿಧವೆ, ನಿರಾಶ್ರಿತ ಮಹಿಳೆ ನಾಗರತ್ನಮ್ಮ ಎಂಬುವರ ಕೂಗಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ನಾಗರತ್ನಮ್ಮಳಿಗೆ ವಸತಿ ನೀಡುವಂತೆ ಲೋಕಾ ಯುಕ್ತರಿಂದ ಹಾಗೂ ಇಲಾಖಾ ಉನ್ನತಾಧಿಕಾರಿಗಳಿಂದ ಸೂಚನೆ ಬಂದಿದೆಯಾದರೂ ಸ್ಥಳೀಯ ಆಡಳಿತ ಕ್ಯಾರೇ ಅನ್ನಲಿಲ್ಲವಂತೆ. ಸ್ಥಳೀಯ ಆಡಳಿತ  ಭ್ರಷ್ಟರ, ಭಂಡರ ಕೂಪವಾಗಿದ್ದು, ಗ್ರಾಪಂನಲ್ಲಿ ಮಾನವೀಯತೆಗೆ ಹಾಗೂ ಅಧಿಕಾರಿಗಳ ಆದೇಶಕ್ಕೆ ಯಾವುದೇ ಮರ್ಯಾದೆ ಇಲ್ಲ ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು. ಹಲವು ಯೋಜನೆಗಳಲ್ಲಿ ಹಾಗೂ ಕಾಮಗಾರಿಗಳಲ್ಲಿ  ಭ್ರಷ್ಟಾಚಾರ ಜರುಗಿರುವ ಶಂಕೆಯಿದ್ದು ಸೂಕ್ತ ತನಿಖೆಯಾಗಬೇಕಿದೆ. ಇಲಾಖೆಗಳಿಗೆ ಸೂಕ್ತ ದಾಖಲುಗಳ ಸಮೇತ ದೂರ ನೀಡಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ. ನಾಗರತ್ನಮ್ಮ ವಿಧವೆ ಇದ್ದು ವಸತಿಗಾಗಿ ಕೆಲ ವರ್ಷಗಳಿಂದ ಸತತ ಮನವಿ ಮಾಡಿದ್ದಾರೆ. ಅರ್ಹ ಪಲಾನುಭವಿಗಳನ್ನ ಪರಿಗಣಿಸದೇ ಜನಪ್ರತಿನಿಧಿಗಳು ಅಧಿಕಾರಿಗಳು ಕೆಲ ಅನರ್ಹರಿಗೆ ಮಣೆಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ. ತನಗಾದ ಅನ್ಯಾಯದ ವಿರುದ್ಧ ನೊಂದ ನಿರಾಶ್ರಿತೆ ಗ್ರಾಪಂ ಕಚೇರಿಮುಂದೆ ಧರಣಿ ನಡೆಸಿದ್ದಾರೆ. ಕಳೆದ ಬಾರಿಯಂತೆ  ಈ ಬಾರಿಯ ವಸತಿ ಹಂಚಿಕೆಯಲ್ಲಿ  ಶೇ 25%ರಷ್ಟು ಭ್ರಷ್ಟಾಚಾರ ಜರುಗಿರುವುದಕ್ಕೆ ಸಾಕ್ಷಿಯಾಗಿದ್ದು, ಇದರಿಂದಾಗಿ ಅರ್ಹ ಪಲಾನುಭವಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕಾರಣ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೋಗಳಿ ಗ್ರಾಪಂ ವ್ಯಾಪ್ತಿಯ ವಸತಿ ಪಲಾನುಭವಿಗಳ ಪಟ್ಟಿಯನ್ನ ತಡೆಹಿಡಿದು ಸೂಕ್ತ ತನಿಖೆಗೆ ಒಪ್ಪಿಸಬೇಕಿದೆ. ಸ್ಥಳ ಮಹಜರು ಪಡೆದು ಅಯೋಗ್ಯರನ್ನು ಬಿಡಬೇಕು ಯೋಗ್ಯರನ್ನು ಪರಿಗಣಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಶೀಘ್ರವೇ ಕೋಗಳಿ ಗ್ರಾಪಂ ಗೆ ಭೆಟ್ಟಿ ನೀಡಬೇಕಿದೆ. ವಸತಿ ಪಲಾನುಭವಿಗಳ ಕುರಿತು ಖುದ್ದು ತನಿಖೆ ಮಾಡಿ ಅನರ್ಹರನ್ನ ಕೈಬಿಬೇಕಿದೆ. ನಿರಾಶ್ರಿತೆ ನಾಗರತ್ನಮ್ಮರಂತಹ ಅರ್ಹರಿಗೆ ವಸತಿ ಕಲ್ಪಿಸಬೇಕಿದ್ದು, ಈ ಮೂಲಕ ಭ್ರಷ್ಟರ ವಿರುದ್ಧ ಚಾಟೀ ಬೀಸಬೇಕಿದ್ದು ಅವರು ಪ್ರಾಮಾಣಿಕತೆ ಕರ್ಥವ್ಯ ನಿಷ್ಠೆ ತೋರಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಭಂಡ, ಭ್ರಷ್ಟ ವ್ಯವಸ್ಥೆಗೆ ಅವರೂ ಕೂಡ ಪರೋಕ್ಷವಾಗಿ ಸಾಥ್ ನೀಡಿದಂತಾಗುತ್ತದೆ. 


ಕೋಗಳಿ ಗ್ರಾಪಂ ವ್ಯಾಪ್ತಿಯಲ್ಲಿ ನ್ಯಾಯ ಎಲ್ಲಿದೆ..!?,ಎಂಬ ನಿರಾಶ್ರಿತೆ ನಾಗರತ್ನಮ್ಮರಂತಹ ಅದೆಷ್ಟೋ ನಿರಾಶ್ರಿತರ ಧ್ವನಿಯನ್ನ ಕೇಳೋರಿಲ್ಲದಂತಾಗುತ್ತದೆ. ಶೋಷಿತರ ಧ್ವನಿಯಾಗಬೇಕಿರುವ ಶಾಸಕರೆಲ್ಲಿರುವಿರಿ.!? ಜನರ ಕಣ್ಣೀರೊರೆಸಬೇಕಿರುವ ಜಿಲ್ಲಾ ಉಸ್ಥುವಾರಿ ಸಚಿವರೇ ಎಲ್ಲಿದ್ದೀರಾ..!? ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಜಿಲ್ಲಾಧಿಕಾರಿಗಳೇ ಗಮನಿಸುವಿರಾ.!? 

ಇತ್ತೀಚಿನ ಸುದ್ದಿ

ಜಾಹೀರಾತು