ಇತ್ತೀಚಿನ ಸುದ್ದಿ
ಕೊಡವೂರು: ಸಾಲದ ಹೊರೆ ತಾಳಲಾಗದೆ ಉಪನ್ಯಾಸಕಿ ನೇಣಿಗೆ ಶರಣು
14/09/2022, 12:51
ಉಡುಪಿ(reporterkarnataka.com): ಆರ್ಥಿಕ ಸಂಕಷ್ಟದಿಂದ ಬೇಸತ್ತ ಉಪನ್ಯಾಸಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡವೂರು ಕಾನಂಗಿ ಎಂಬಲ್ಲಿ ನಡೆದಿದೆ.
ಕೊಡವೂರು ಕಾನಂಗಿಯ ನಿವಾಸಿ ಬೀನಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಶಿರ್ವಾದ ಹಿಂದೂ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೀನಾ ಅವರ ಪತಿ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರು 9 ತಿಂಗಳ ಹಿಂದೆ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸಾಲದ ಹೊರೆ ಬೀನಾ ಅವರ ಮೇಲೆ ಇತ್ತು. ಆದರೆ ತನಗೆ ಬರುತ್ತಿದ್ದ ಕಡಿಮೆ ವೇತನದಿಂದ ಸಾಲ ತೀರಿಸಲಾಗದೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಬೀನಾ ಅವರ ತಂದೆ ತಾಯಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದರು. ಆದರೆ ಬೆಳಿಗ್ಗೆ ಬಂದು ನೋಡಿದಾಗ ಬೀನಾ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.