ಇತ್ತೀಚಿನ ಸುದ್ದಿ
Kodagu | ಚೆಟ್ಟಳ್ಳಿಯಲ್ಲಿ ಉರುಳಿಗೆ ಸಿಲುಕಿ ಹುಲಿ ದಾರುಣ ಸಾವು
17/12/2025, 10:34
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸುಮಾರು 5 ವರ್ಷದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನಪ್ಪಿರುವ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ಕುಶಾಲನಗರ ತಾಲ್ಲೂಕು ಚೇರಳ-ಶ್ರೀಮಂಗಲ ಗ್ರಾಮದ ಅಪ್ಪಯ್ಯ ಎಂಬುವರ ಕಾಫಿ ತೋಟದ ಬೇಲಿ ಬದಿಯಲ್ಲಿ ಮದ್ಯ ವಯಸ್ಸಿನ ಈ ಹುಲಿಯ ಕತ್ತಿನ ಭಾಗಕ್ಕೆ ಉರುಳು ಸಿಲುಕಿ ಮೃತ ವಾಗಿದ್ದು ಸುಮಾರು 5 ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಿಂದ ಬಂದಿರುವ ಶಂಕೆಯಿದ್ದು, ಕಾಡು ಪ್ರಾಣಿಗಳ ಹಾವಳಿಗೆ ತಡೆ ಇಲ್ಲವೇ ಬೀಟೆಗೆ ಉರುಳು ಹಾಕಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸದ್ದಾರೆ.





ಈ ಕುರಿತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳದಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ. ಹುಲಿಯನ್ನು ಆನೆಕಾಡು ಮೀಸಲು ಅರಣ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.












