ಇತ್ತೀಚಿನ ಸುದ್ದಿ
Kodagu | ಸುಂಟಿಕೊಪ್ಪ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ಹೃದಯಘಾತದಿಂದ ದಾರುಣ ಸಾವು
26/10/2025, 21:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆಂಚಟ್ಟಿಯಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುವ ವೇಳೆ ಹೃದಯಾಘತ ದಿಂದ ಯುವಕ ಮೃತಾಪಟ್ಟಿದ್ದಾನೆ.
ಮೃತನನ್ನು ಗ್ರಾಮದ ರೈಟರ್ ಆಗಿದ್ದ ರಾಮಣ್ಣ ಪೂಜಾರಿ ಅವರ ಮೊಮ್ಮಗ ಅರುಣ್ ಪೂಜಾರಿ (25) ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅರುಣ್ ಪೂಜಾರಿ ರಜಾಕ್ಕೆ ಎಂದು ಮನೆಗೆ ಬಂದಿದ್ದ ಎನ್ನಲಾಗಿದ್ದು, ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವ ವೇಳೆ ಸುಸ್ತಾಗಿ ಕುಸಿದು ಬಿದ್ದಿದ್ದಾನೆ, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಪ್ರಯೋಜನವಾಗಿಲ್ಲ.












