ಇತ್ತೀಚಿನ ಸುದ್ದಿ
Kodagu | ಸುಂಟಿಕೊಪ್ಪ; ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿದ ಮೂವರು ಮಹಿಳೆಯರು
15/09/2025, 10:44

ಗಿರಿಧರ್ ಕೊಂಪುಳಿರ ಮಡಿಕೇರಿ
info.repprterkarnataka@gmail.com
ಚಿನ್ನ ಖರೀದಿಸುವ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮೂವರು ಮಹಿಳೆಯರು ಕ್ಷಣಾರ್ಧದಲ್ಲಿ ಚಿನ್ನದ ಸರವನ್ನು ಕದ್ದೋಯ್ದ ಘಟನೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ.
ಸುಂಟಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಫ್ಯಾಷನ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳಿಯರು ಕರಾಮತ್ತನ್ನು ತೋರಿಸಿ 22 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ.
ನೆನ್ನೆ ಸಂಜೆ 5 ಗಂಟೆ ಸಮಯದಲ್ಲಿ ಈ ಚಿನ್ನದ ಅಂಗಡಿಗೆ ಮಗುವಿನೊಂದಿಗೆ ಬಂದಿದ್ದ ಮೂವರು ಮಹಿಳೆಯರು ಚಿನ್ನದ ಆಭರಣ ಖರೀದಿಸುವ ನಾಟಕವಾಡಿದ್ದಾರೆ. ಅಂಗಡಿಯವರ ಅರಿವಿಗೆ ಬಾರದಂತೆ ಕ್ಷಣಾರ್ಧದಲ್ಲಿ ಕೈಚಳಕ ತೋರಿಸಿ 22 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ರಾತ್ರಿ 9.30 ರ ಸಮಯದಲ್ಲಿ ಸ್ಟಾಕ್ ಚೆಕ್ ಮಾಡುವಾಗ ಚಿನ್ನದ ಸರ ಕಳ್ಳತನ
ಆಗಿರುವುದು ಅರಿವಿಗೆ ಬಂದಿದೆ.
CC TV ಚೆಕ್ ಮಾಡುವಾಗ ಈ ಮಹಿಳೆಯರ ಕರಾಮತ್ತು ಸೆರೆಯಾಗಿರುವುದು ಕಂಡು ಬಂದಿದೆ.