ಇತ್ತೀಚಿನ ಸುದ್ದಿ
Kodagu | ಸೋಮವಾರಪೇಟೆ: ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ರೈತರ ಬೃಹತ್ ಹೋರಾಟ
03/11/2025, 15:54
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಿ ಮತ್ತು ಡಿ ಜಾಗ, ಸೆಕ್ಷನ್4, ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಲು ಒತ್ತಾಯ ಅರಣ್ಯ ಇಲಾಖೆಯ ಕ್ರಮದ ವಿರುದ್ದ ತೀವ್ರ ಪ್ರತಿಭಟನೆ ಸೋಮವಾರಪೇಟೆಯಲ್ಲಿ ನಡೆಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದ ರೈತರು ಜೆ.ಸಿ. ವೇದಿಕೆಯಲ್ಲಿ ಬೃಹತ್ ರೈತ ಸಮಾವೇಶ ನಡೆಸಿದರು.






ಸೋಮವಾರ ಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿರುವ ರೈತರು ನೆರೆಯ ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಯಿಂದಲೂ ರೈತ ಮುಖಂಡರು ಭಾಗಿಯಾಗಿದ್ದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್, ರೈತ ಸಂಘದ ಅಧ್ಯಕ್ಷ ದಿನೇಶ್, ರಾಜ್ಯ ರೈತ ಸಂಘದ ನಾಯಕರಾದ ಹೊನ್ನೂರು ಪ್ರಕಾಶ್, ಕಿರಣ್ ಭಾಗವಹಿಸಿದ್ದರು.












