ಇತ್ತೀಚಿನ ಸುದ್ದಿ
Kodagu | ಶನಿವಾರಸಂತೆ: ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ; ಆರೋಪಿಯ ಬಂಧನ
22/08/2025, 10:17

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಬಳಿಯ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು ಸ್ಥಳೀಯರು ಧರ್ಮ ದೇಟು ಕೊಟ್ಟು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಕಿರಿಬಿಳಹ ಗ್ರಾಮದ ಲೋಕೇಶ್ ಅಲಿಯಾಸ್ ಪುಟ್ಟ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಶಾಲೆ ಮುಗಿಸಿಕೊಂಡು ಮನೆಯತ್ತ ತೆರಳುತ್ತಿದ್ದ ಸಂದರ್ಭ ಕಾದು ಕುಳಿತ್ತಿದ್ದ ಲೋಕೇಶ್ ವಿದ್ಯಾರ್ಥಿನಿ ಮೇಲೆ ಎರಗಿದ್ದಾನೆ, ತಕ್ಷಣ ಬಾಲಕಿ ಜೋರಾಗಿ ಕೂಗಿಕೊಂಡ ಹಿನ್ನಲೆ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ಅತ್ಯಾಚಾರ ಯತ್ನ ನಡೆಸಿದ್ದಾತನನ್ನು ಹಿಡಿದು ಶನಿವಾರಸಂತೆ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.