ಇತ್ತೀಚಿನ ಸುದ್ದಿ
Kodagu | ಪೊನ್ನoಪೇಟೆ: 11 ಕೆವಿ ವಿದ್ಯುತ್ ತಂತಿ ಬಿದ್ದು 3 ಹಸುಗಳ ದಾರುಣ ಸಾವು
23/07/2025, 10:55

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನoಪೇಟೆ ತಾಲ್ಲೂಕಿನ ತೆರಾಲು ಗ್ರಾಮದಲ್ಲಿ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಮೇಯಲು ಬಿಟ್ಟಿದ್ದ ಮೂರು ಹಸುಗಳು ದಾರುಣವಾಗಿ ಸಾವನಪ್ಪಿದೆ. ಗ್ರಾಮದ ಕೃಷಿಕ ಬಿ. ಡಾಲಿ. ಪೂವಪ್ಪ ಅವರಿಗೆ ಸೇರಿದ ಹಸುಗಳನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಪರಿಣಾಮ ಗದ್ದೆಯಲ್ಲಿದ್ದ ನೀರಿನ ಮೂಲಕ ವಿದ್ಯುತ್ ಹರಿದು ಹಸುಗಳು ಮೃತಪಟ್ಟಿದೆ.
ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.