ಇತ್ತೀಚಿನ ಸುದ್ದಿ
Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ
07/09/2025, 20:04

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕೆ.ನಿಡುಗಣೆ ಗ್ರಾಮ ಪಂಚಾಯತ್ ಬಳಿಯ ನಂದಿಮೊಟ್ಟೆಯಲ್ಲಿ ಜೀಪ್ ಮಾಲಿಕ ಒಬ್ಬ ಪ್ರವಾಸಿಗರ ಮೇಲೆ ಮಾರಣಾಂತಿಕ ಹಲ್ಲೆಮಾಡಿರುವ ಬಗ್ಗೆ ವರದಿಯಾಗಿದೆ.
ನಿನ್ನೆಯ ದಿನ ಮಾಂದಲಪಟ್ಟಿಗೆ ಭೇಟಿ ನೀಡಲು ಚೆನ್ನೈ ಮೂಲದ ಕುಟುಂಬ ತಮ್ಮ ವಾಹನದಲ್ಲಿ ನಂದಿ ಮೊಟ್ಟೆ ಜೀಪ್ ಸ್ಟಾಂಡ್ ಗೆ ಬಂದಿದೆ. ಬಾಡಿಗೆಯ ಬಗ್ಗೆ ಜೀಪ್ ಚಾಲಕನ ಬಳಿ ಮಾತನಾಡುತ್ತಿದ್ದಾಗ ಜೀಪ್ ಚಾಲಕ ಮಹಿಳೆ ಸೇರಿದಂತೆ ಅವರ ಕುಟುಂಬದ ಸದಸ್ಯರಿಗೆ ಮನಬಂದಂತೆ ಚಚ್ಚಿದ್ದಾನೆ. ತೀವ್ರ ಹಲ್ಲೆಗೊಳಗಾದ ಜಯಂತಿ ಮತ್ತು ಅವರ ಕುಟುಂಬದವರು ಚಿಕಿತ್ಸೆ ಪಡೆಯುತ್ತಿದ್ದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.