ಇತ್ತೀಚಿನ ಸುದ್ದಿ
Kodagu | ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ಪ್ರಮುಖ ಆರೋಪಿ ಮಹಿಳೆ ಬಂಧನ
13/12/2025, 21:15
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಂಡ್ಯದ ಮದ್ದೂರಿನ ಮಹದೇವ ಮೇಲೆ ನಡೆದ ಹಲ್ಲೆ ಮತ್ತು ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಮಹದೇವ ಅರೆಬೆತ್ತಲೆಯಾಗಿ ಪೊಲೀಸ್ ಠಾಣೆಗೆ ಓಡಿಬಂದು ದೂರು ನೀಡಿದ ಬೆನ್ನಲ್ಲೇ ಆಕ್ಟಿವ್ ಆಗಿರುವ ಪೊಲೀಸರು ಪ್ರಕರಣದ ಕಿಂಗ್ ಪಿನ್ ಆಂಟಿ ಅನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳು ಮಡಿಕೇರಿ ನಗರದ ಅಶೋಕಪುರಂ ನಿವಾಸಿ ರಚನಾ ಎಂದು ಗುರುತಿಸಲಾಗಿದೆ. ಮಾಜಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಪತ್ನಿ ಯಾಗಿದ್ದ ಈಕೆ ವಿಚ್ಛೇದನ ಬಳಿಕ ಹಣ ಮಾಡುವ ಕೃತ್ಯಕ್ಕೆ ಇಳಿದಿದ್ದಾಳೆ ಎಂದು ಎನ್ನಲಾಗಿದೆ.
ಪ್ರಕರಣ ಸಂಬಂಧ ತಲೆಮರೆಸಿಕೊಂಡ ಉಳಿದ ಮೂವರ ಶೋಧ ಕಾರ್ಯ ನಡೆಸಲಾಗುತ್ತಿದೆ.













