ಇತ್ತೀಚಿನ ಸುದ್ದಿ
Kodagu | ಮಡಿಕೇರಿ: 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಕಾಡಿನಲ್ಲಿ ಪತ್ತೆ
29/10/2025, 12:07
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಅರಣ್ಯದ ಅಂಚಿನ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ದೇವಸ್ತುರು ನಿಂದ ಕಳೆದ 15 ದಿನಗಳಿಂದ ನಾಪತ್ತೆ ಯಾಗಿ ಮನೆಯವರಿಗೆ ಆತಂಕ ಮೂಡಿಸಿದ್ದ ಸೋಮೇಟ್ಟಿ ಕೀರ್ತನ್ (31) ಮಾoದಳಲಪಟ್ಟಿ ಅರಣ್ಯದಲ್ಲಿ ಪತ್ತೆಯಾಗಿದ್ದಾನೆ.
15 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕೀರ್ತನ್ ಸ್ಥಳೀಯವಾಗಿ ಹುಡುಕಾಟ ನಡೆಸಲಾಗಿತ್ತು, ಅಂಜನಾ ಪ್ರಶ್ನೆ ಮೂಲಕ ಅರಣ್ಯದ ಒಳಗೆ ತೆರಳಿರುವ ಬಗ್ಗೆ ಸೂಚನೆ ನೀಡಲಾಗಿತ್ತು, ಜೊತೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ಅರಣ್ಯ ಪದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.













