ಇತ್ತೀಚಿನ ಸುದ್ದಿ
Kodagu | ಕುಶಾಲನಗರ ಸಮೀಪ ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ: ಆರೋಪಿಯ ಬಂಧನ
04/11/2025, 11:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪತಿಯಿಂದಲೇ ಪತ್ನಿಯ ಭೀಕರ  ಹತ್ಯೆ ನಡೆದ ಘಟನೆ
ಕುಶಾಲನಗರ ತಾಲ್ಲೂಕಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ತಾಲ್ಲೂಕಿನ ಕೊಡಗರಹಳ್ಳಿ ಸಮೀಪದ ಅಂದಗೋವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಗೃಹಿಣಿಯನ್ನು ಲತಾ(45) ಎಂದು ಗುರುತಿಸಲಾಗಿದೆ.
ಪತಿ ಮುತ್ತ(50) ಎಂಬಾತ ತನ್ನ ಪತ್ನಿ ಲತಾ  ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದು ಕೊಲೆಯಲ್ಲಿ ಅಂತ್ಯ ಕಂಡಿದೆ. ಸ್ಥಳಕ್ಕೆ ಸುಂಟಿಕೊಪ್ಪ, ಕುಶಾಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪೊಲೀಸರು ಆರೋಪಿ ಮುತ್ತ ನನ್ನು ಬಂಧಿಸಿದ್ದಾರೆ.












