1:58 PM Saturday21 - March 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್ ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ…

ಇತ್ತೀಚಿನ ಸುದ್ದಿ

ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ ಸೂಚನೆ

19/03/2026, 12:37

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ರಾಷ್ಟ್ರೀಯ ಹೆದ್ದಾರಿ-275 ಕಿ.ಮೀ.71.600 ರಿಂದ ಕಿ.ಮೀ.130.21 ರವರೆಗೆ ಸಂಪಾಜೆಯಿಂದ ಕುಶಾಲನಗರ ಕಾವೇರಿ ನದಿ ಸೇತುವೆ ವರೆವಿಗೂ ಈಗಾಗಲೇ ತೆರವುಗೊಳಿಸಲಾಗಿದ್ದ ಅನಧಿಕೃತ ಜಾಹಿರಾತು ಫಲಕಗಳನ್ನು ಮತ್ತು ವ್ಯಾಪಾರಿಗಳು ಹಣ್ಣಿನ ಅಂಗಡಿ ಮತ್ತು ಗೂಡಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿಯ ಪರಧಿಯ ಒಳಗೆ ಪುನರ್ ಸ್ಥಾಪಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಗ್ರಾಹಕರ ವಾಹನಗಳು ಪುಟ್‍ಪಾತಿನಲ್ಲಿ ನಿಂತು ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ವಾಹನಗಳ ಸರಾಗ ಚಲನೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಮತ್ತು ಅನಧಿಕೃತ ಜಾಹಿರಾತು ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿಯ ಫರಿದಿಯಿಂದ ಮಾರ್ಚ್ 23ರೊಳಗೆ ತಾವೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಮಾರ್ಚ್ 24 ರಿಂದ ಅನಧಿಕೃತ ಬೋರ್ಡ್ ಮತ್ತು ಮಳಿಗೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಮತ್ತು ತೆರವು ಕಾರ್ಯಾಚರಣೆಯಲ್ಲಿ ವ್ಯಾಪಾರಿಗಳಿಗೆ ನಷ್ಟವಾದಲ್ಲಿ ಇಲಾಖೆಯು ಜವಾಬ್ದಾರವಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು