ಇತ್ತೀಚಿನ ಸುದ್ದಿ
Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ
19/03/2026, 22:06
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸಾವಿಗೀಡಾಗಿ ಮತ್ತೋರ್ವ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಕೆಂಚಿಟ್ಟಿಯಲ್ಲಿ ನಡೆದಿದೆ.
ಮಾದಾಪುರ ಜಂಬೂರು ನಿವಾಸಿ ಅನಿಲ್ ಕುಮಾರ್ ಮೃತ ದುರ್ದೈವಿ. ಹಿಂಬದಿ ಸವಾರ ಗರಗಂದೂರು ಗ್ರಾಮದ ದಿನೇಶ್ ಎಂಬುವವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಇವರಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಕೆಂಚಟಿಯಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು, ಇದರಿಂದ ತೀವ್ರ ಗಾಯಗೊಂಡ ಅನಿಲ್ ಕುಮಾರ್ ಅವರು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ.












