ಇತ್ತೀಚಿನ ಸುದ್ದಿ
Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ ಮೊಬೈಲ್ ಫೋನ್ ಕಳ್ಳತನ: ಬಂಧನ
29/08/2025, 14:21

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿರುವ ಫಲೀಲ್ ಎಂಬುವವರಿಗೆ ಸೇರಿದ Harmony Phones ಅಂಗಡಿಯ ರೋಲಿಂಗ್ ಶೆಟರ್ಸ್ ಮುರಿದು ವಿವಿಧ ಕಂಪೆನಿಗಳ ಹೊಸ 32 ಮೊಬೈಲ್ ಫೋನ್ ಗಳು ಮತ್ತು ರೂ. 3 ಸಾವಿರ ನಗದು ಹಣ ಕಳವು ಮಾಡಿರುವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತೇಗೂರು ಗ್ರಾಮದ ನಿವಾಸಿ, ಅಸ್ಸಾಂ ಮೂಲದ ಜೋಹುರ್ ಆಲಿ (28) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 32 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಳ್ಳತನದ ಪ್ರಕರಣದ ಬಗ್ಗೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಕಲಂ 331(4), 305(ಎ), BNS Act ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗಾಗಿ ವಿರಾಜಪೇಟೆ DSP ಮಹೇಶ್ ಕುಮಾರ್, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಪಿಎಸ್ಐ ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿ ಮಾಹಿತಿ ಸಂಗ್ರಹಿಸಿ ಜೋಹುರ್ ಆಲಿ (28) ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.