ಇತ್ತೀಚಿನ ಸುದ್ದಿ
Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ
07/03/2026, 12:57
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarmataka@mail.com
ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಗರ್ಭಾಶಯದಿಂದ ಸುಮಾರು 7 ಕೆಜಿ ತೂಕದಷ್ಟು ಗೆಡ್ಡೆಯನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.


ಡಾ. ವಿಶ್ವನಾಥ್ ಸಿಂಪಿ 47 ವರ್ಷದ ಮಹಿಳೆಗೆ ಹಲವು ಪರೀಕ್ಷೆಗಳು ನಡೆಸಿದ್ದು, ಗರ್ಭಾಶಯದಲ್ಲಿ ಗೆಡ್ಡೆ (tumour) ಬೆಳೆದಿರುವುದು ಕಂಡು ಬಂದಿದ್ದು ವೈದ್ಯರ ತಂಡ 1 ಗಂಟೆಗಳ ಶಸ್ತ್ರ ಚಿಕಿತ್ಸೆ ಮೂಲಕ ಗೆಡ್ಡೆ ಹೊರತೆಗೆದಿದ್ದು, ಮಹಿಳೆ ಇದೀಗ ನಿರಾಳರಾಗಿದ್ದಾರೆ.












