ಇತ್ತೀಚಿನ ಸುದ್ದಿ
Kodagu | ಕುಶಾಲನಗರದ ಕೂಡ್ಲುರು ಕಾಫಿ ಘಟಕದಲ್ಲಿ 17 ಟನ್ ಕಾಫಿ ಕಳುವು: ಶಂಕಿತ ಕಾರ್ಮಿಕರು ಪೊಲೀಸ್ ವಶಕ್ಕೆ
29/08/2025, 10:00

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರದ ಕೂಡ್ಲುರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಅದೇ ಕಂಪನಿಯ ನೌಕರರು ಹಂತಹoತವಾಗಿ ಅಪಾರ ಪ್ರಮಾಣದ ಕಾಫಿ ಸಾಗಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಅಂದಾಜು 50 ಲಕ್ಷ ಮೌಲ್ಯದ 17 ಟನ್ ನಷ್ಟು ಕಾಫಿ ನಾಪತ್ತೆಯಾಗಿರುವ ಬಗ್ಗೆ ಸಂಸ್ಥೆಗೆಯ ವ್ಯವಸ್ಥಾಪಕ ಗಣೇಶ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಪ್ರಮುಖ ಆರೋಪಿ ಘಟಕದ ಸೂಪರ್ ವೈಸರ್ ಬೈಲೂಕುಪ್ಪೆ ನಿವಾಸಿ ಸುನಿಲ್ ತಲೆ ಮರೆಸಿಕೊಂಡಿದ್ದಾನೆ. ಮುಖ್ಯ ಗೇಟ್ ಮೂಲಕವೇ ಸಾಗಾಟ ನಡೆಸುತ್ತಿದ್ದ ಹಿನ್ನಲೆಯಲ್ಲಿ ಲೋಡರ್ ಗಳು, ಭದ್ರತೆ ಸಿಬ್ಬಂಧಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.