ಇತ್ತೀಚಿನ ಸುದ್ದಿ
ಕೊಚ್ಚಿ ಮೂಲದ ವಿದ್ಯಾರ್ಥಿ ಕಳೆದುಕೊಂಡ ಮೊಬೈಲನ್ನು ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಿ ಮರಳಿಸಿದ ಪೊಲೀಸ್ ಅಧಿಕಾರಿ
22/08/2023, 22:54

ಮಂಗಳೂರು(reporterkarnataka.com): ಸುಮಾರು 10 ದಿನಗಳ ಹಿಂದೆ ನಗರದ ನೆಹರೂ ಮೈದಾನದಲ್ಲಿ ಮೊಬೈಲ್ ಕಳೆದು ಕೊಂಡಿದ್ದ ಕೊಚ್ಚಿ ಮೂಲದ ಮಂಗಳೂರು ವಿದ್ಯಾರ್ಥಿಯ ಮೊಬೈಲ್ ಪತ್ತೆ ಹಚ್ಚಿ ಪೊಲೀಸರು ಮರಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ದ ಪರೇಡ್ ನಲ್ಲಿ ಭಾಗವಹಿಸಲು ಆಗಸ್ಟ್ 11 ರಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ತಂಡ ಸಿದ್ಧತೆ ನಡೆಸುತ್ತಿದ್ದಾಗ ವಿದ್ಯಾರ್ಥಿಯ ಬ್ಯಾಗ್ ಕಳ್ಳತನವಾಗಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಡಿಸಿಪಿ ದಿನೇಶ್ ಕುಮಾರ್ ಅವರ ಮುತುವರ್ಜಿಯಲ್ಲಿ 10 ದಿನ ದಿನಗಳೊಳಗೆ ಪತ್ತೆ ಹಚ್ಚಿದ್ದು . ಮೊಬೈಲ್ ಕಳೆದು ಕೊಂಡ ಕೊಚ್ಚಿ ಮೂಲದ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗೆ ಮೊಬೈಲ್ ಹಸ್ತಾಂತರಿಸಲಾಯಿತು.
, ಸೌತ್ ಪೊಲೀಸ್ ಠಾಣಾ ಪ್ರಭಾರ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಎ.ಎಸ್. ಐ ಶ್ರೀಧರ್,ಪಾಂಡೇಶ್ವರ ಐಟಿ ಸೆಲ್ ನ ಕಾನ್ಸ್ಟೇಬಲ್ 836, (ಮಂಜುನಾಥ್ )
ತನಿಖೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಉಪಸ್ಥಿತರಿದ್ದರು.