ಇತ್ತೀಚಿನ ಸುದ್ದಿ
ಕೆಎಂಎಫ್ ಹಾಲಿನ ಉತ್ಪನ್ನಗಳ ಬೆಲೆ ಏರಿಕೆ: ಗ್ರಾಹಕರ ತೀವ್ರ ಆಕ್ರೋಶ
09/12/2022, 20:36

ಬೆಂಗಳೂರು(reporterkarnataka.com): ಕೆಎಂಎಫ್ ಹಾಲಿನ ಉತ್ಪನ್ನಗಳ ದರ ಬೆಲೆ ಏರಿಕೆ ಕುರಿತು ಗ್ರಾಹಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಪ್ಪದ ದರ ಏರಿಕೆಯಾಗುತ್ತಿವೆ. ಪ್ರತಿ ಉತ್ಪನ್ನದ ಮೇಲೆ 5% ರಿಂದ 15% ದರ ಏರಿಕೆ ಮಾಡಲಾಗುತ್ತಿದೆ. ನವೆಂಬರ್ 24 ರಂದು ಕೆಎಂಎಫ್ ನಂದಿನಿ ಹಾಲು, ಮೊಸರಿನ ದರದ ಮೇಲೆ 2 ರೂಪಾಯಿ ಏರಿಸಿತ್ತು. ಈ ದರ ಏರಿಕೆಯ ಸಂಪೂರ್ಣ ಹಣವನ್ನು ರೈತರಿಗೆ ನೀಡುವುದಾಗಿ ಕೆಎಂಫ್ ಹೇಳಿತ್ತು. ಆದ್ರೆ ಹಾಲು, ಮೊಸರು ದರ ಏರಿಕೆಗೂ ಮೊದಲೇ ಹಂತ ಹಂತವಾಗಿ ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಹೆಚ್ಚಳ ಮಾಡಿಕೊಂಡು ಬಂದಿದೆ.
ತುಪ್ಪ 1 ಕೆ.ಜಿ 520 ರಿಂದ 610 ರೂಗೆ , ಪೇಡ 250 ಗ್ರಾಂ 105 ರಿಂದ 140 ರೂಪಾಯಿ , ಮೈಸೂರು ಪಾಕ್ 250 ಗ್ರಾಂ 115 ರಿಂದ 160 ರೂಪಾಯಿಗೆ , ಕೋವಾ 200 ಗ್ರಾಂ 90 ರಿಂದ 100 ರೂಪಾಯಿ ,ಜಾಮೂನ್ ಅರ್ಧ ಕೆಜಿ ಟಿನ್ 105 ರಿಂದ 135 ರೂಪಾಯಿ, ಪ್ಲೇವರ್ಡ್ ಮಿಲ್ಕ್ 20 ರಿಂದ 25 ರೂಪಾಯಿಗೆ ಏರಿಕೆ ಮಾಡಲಾಗಿದೆ.