ಇತ್ತೀಚಿನ ಸುದ್ದಿ
ಕೆಐಒಸಿಎಲ್: ಮಂಗಳೂರು 2 ಯೋಜನೆ ಸೇರಿದಂತೆ ಒಟ್ಟು 4 ಯೋಜನೆಗಳಿಗೆ ಕೇಂದ್ರ ಆಸ್ತು
23/06/2021, 07:59
ಮಂಗಳೂರು(reporterkarnataka news); ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ಮಂಗಳೂರಿನಲ್ಲಿ ಮಾಡಲುದ್ದೇಶಿಸಿದ ಎರಡು ಯೋಜನೆಗಳು ಸೇರಿದಂತೆ ಒಟ್ಟು ನಾಲ್ಕು ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಮೂಡಬಿದಿರೆಯ ಸರ್ಕಾರಿ ಆಸ್ಪತ್ರೆಗೆ 50 ಹಾಸಿಗೆಗಳನ್ನು ಒಟ್ಟು ರೂ. 18.00 ಲಕ್ಷ ವೆಚ್ಚದಲ್ಲಿ ನೀಡುವ ಕಾರ್ಯಕ್ರಮ ಹಾಗೂ ಮಂಗಳೂರಿನ ಕೆ.ಐ.ಒ.ಸಿ.ಎಲ್ ಪೆಲೆಟ್ ಪ್ಲಾಂಟ್ ನ ಆಧುನೀಕರಣದ ಅಂಗವಾಗಿ ಸುಮಾರು 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾರೆಲ್ ಟೈಪ್ ಬ್ಲೆಂಡರ್ ರೆಕ್ಲೈಮರ್ (Barrel Type Blender Reclaimer) ನ್ನು ಕೇಂದ್ರ ಸಚಿವರು ಉದ್ಘಾಟಿಸಿದರು.
ಕೋವಿಡ್ 19 ವೈರಾಣು ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಕುದುರೆಮುಖ ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಈಗಾಗಲೇ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ಉಪ್ಪಿನಂಗಡಿ ಹಾಗೂ ಮೂಡಬಿದಿರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 250LPM (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕವನ್ನು ನೀಡುತ್ತಿರುವುದಕ್ಕಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆಯ ಸಚಿವರ
ಧರ್ಮೇಂದ್ರ ಪ್ರಧಾನ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.ಸಂಸದ ನಳಿನ್ ಕುಮಾರ್ ಕಟೀಲ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಆಶ್ವಥ ನಾರಾಯಣ ಹಾಜರಿದ್ದರು.