6:24 PM Friday21 - February 2025
ಬ್ರೇಕಿಂಗ್ ನ್ಯೂಸ್
ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ… ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!? State Budget | ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ… Deeptech & AI | ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನವೋದ್ಯಮಗಳಿಗೆ ನೆರವು: ಸಚಿವದ್ವಯರಾದ… ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಮಾಜಿ ಸಿಎಂ ಬಸವರಾಜ… Lokayukta | ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ: ಹುಬ್ಬಳ್ಳಿಯಲ್ಲಿ ಕೇಂದ್ರ… ನಂಜನಗೂಡು: ಆಹಾರ ಸುರಕ್ಷತಾ ಅಧಿಕಾರಿಗಳಿಂದ ಹೋಟೆಲ್ ಗಳಿಗೆ ದಿಢೀರ್ ದಾಳಿ; ಇಡ್ಲಿ ತಯಾರಿಕೆಯಲ್ಲಿ… ಲಿಂಗಸುಗೂರ: ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ; ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ,… Waterfalls Tragedy | ಚಿಕ್ಕಮಗಳೂರು ಕಾಮೇನಹಳ್ಳಿ ಜಲಪಾತ: ಈಜಲು ಹೋದ ಯುವಕನ ತಲೆ…

ಇತ್ತೀಚಿನ ಸುದ್ದಿ

ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ ಕೃಷಿಕ!: ಪಡ್ಡೆ ಹುಡ್ಗರು ಫುಲ್ ಖುಷ್!!

21/02/2025, 18:16

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಫಲವತ್ತಾದ ಕೃಷಿ ಭೂಮಿಯಲ್ಲಿ ಸೊಗಸಾಗಿ ಬೆಳೆದ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರಕ್ಕಸನ ಮುಖವಾಡ ಅಥವಾ ದೃಷ್ಟಿ ಬೊಂಬೆಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಆದರೆ, ಇದಕ್ಕೆ ಬದಲಾಗಿ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಬಳಿ ಇರುವ ಕಕ್ಕರಹಟ್ಟಿ ಗ್ರಾಮದ ರೈತನೊಬ್ಬ ಐನಾತಿ ಐಡಿಯಾ ಹುಡುಕಿದ್ದಾನೆ.
ವಿಚಿತ್ರ ಆದರೂ ಸತ್ಯ ಎಂಬ ಮಾತಿನಂತೆ ಬೆದರು ಬೊಂಬೆಯ ಬದಲಾಗಿ ಅರೆಬೆತ್ತಲೆಯಾಗಿ ಇರುವ ಲೇಡಿ ಮಾಡೆಲ್ ಗಳ ಫೋಟೋಗಳನ್ನ ತನ್ನ ಜಮೀನಿನ ಸುತ್ತ ಅಳವಡಿಸಿ ಗ್ರಾಮಸ್ಥರು ಮತ್ತು ದಿನನಿತ್ಯ ಸಂಚರಿಸುವ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದ್ದಾನೆ.
ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಚುಂಚನಹಳ್ಳಿ ಬಳಿ ಇರುವ ಕಕ್ಕರಹಟ್ಟಿ ರೈತ ಸೋಮೇಶ್ ಇಂತಹ ಐನಾತಿ ಐಡಿಯಾ ಹುಡುಕಿ ಚರ್ಚೆಗೆ ಗ್ರಾಸವಾಗಿರುವ ವ್ಯಕ್ತಿ.
ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆಯನ್ನು ಸೊಗಸಾಗಿ ಬೆಳೆದಿದ್ದಾನೆ. ಬಾಳೆ ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದಾನೆ.


ತನ್ನ ಜಮೀನಿನ ಸುತ್ತ ಸುಮಾರು ಹತ್ತಾರು ಕಡೆ ಲೇಡಿ ಮಾಡೆಲ್ ಅರೆಬೆತ್ತಲೆ ಚಿತ್ರಗಳು ರಾರಾಜಿಸುತ್ತಿವೆ.
ದಾರಿಹೋಕರಂತೂ ಸೊಗಸಾಗಿ ಸಮೃದ್ದಿಯಾಗಿ ಬೆಳೆದ ಬಾಳೆ ಗಿಡಗಳ ಮೇಲೆ ದೃಷ್ಟಿ ಹರಿಸದೆ ಮಾಡೆಲ್ ಚಿತ್ರಗಳನ್ನಷ್ಟೇ ಕಣ್ತುಂಬಿಕೊಂಡು ಸಾಗುತ್ತಿದ್ದಾರಂತೆ.
ರೈತ ಸೋಮೇಶ್ ನ ಐನಾತಿ ಐಡಿಯಾ ಕೆಲವು ಗ್ರಾಮಸ್ಥರನ್ನ ಕೆರಳಿಸಿದ್ರೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವುದಂತೂ ನಿಜ.
ಒಟ್ಟಾರೆ ಸೋಮೇಶ್ ರವರ ಐಡಿಯಾನ ಹೊಗಳಬೇಕೋ…ತೆಗಳಬೇಕೋ…? ಎಂಬುದು ಗ್ರಾಮಸ್ಥರು ಮತ್ತು ಸಾರ್ವಜನಿಕರ ನಿರ್ಧಾರಕ್ಕೆ ಬಿಟ್ಟಿದ್ದು…!

ಇತ್ತೀಚಿನ ಸುದ್ದಿ

ಜಾಹೀರಾತು