7:03 PM Friday24 - January 2025
ಬ್ರೇಕಿಂಗ್ ನ್ಯೂಸ್
7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ…

ಇತ್ತೀಚಿನ ಸುದ್ದಿ

ಕಿದ್ವಾಯಿ ಆಸ್ಪತ್ರೆಯ ಹೊಸ ಸಾಧನೆ: 1 ಸಾವಿರ ರೋಬೋಟಿಕ್ ಶಸ್ತ್ರಚಿಕಿತ್ಸೆ: ಕ್ಯಾನ್ಸರ್ ರೋಗಿಗಳಿಗೆ ಉಚಿತ, ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ನೀಡುವುದೇ ಧ್ಯೇಯ

24/01/2025, 18:36

ಬೆಂಗಳೂರು(reporterkarnataka.com): ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೊಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಅತ್ಯಾಧುನಿಕ ಡಾ. ವಿನ್ಸಿ ರೋಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದುವರೆಗೆ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷ ಮೈಲುಗಲ್ಲು ಸಾಧಿಸಿದೆ. ಸರಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಮಾತ್ರ ರೋಬೋಟಿಕ್ ಸರ್ಜರಿ ಸೌಕರ್ಯ ಇರುವುದು ಮತ್ತೊಂದು ಹೆಗ್ಗಳಿಕೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಹಲವು ಸಾಧನೆಗಳನ್ನು ಮಾಡುವಲ್ಲಿ ದಾಫುಗಾಲಿಡುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಚ್ಚು ಚಿಕಿತ್ಸೆ ನೀಡಿದ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಒಳರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಿದ ಏಕೈಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಗೌರವಕ್ಕೂ ಕಿದ್ವಾಯಿ ಸಂಸ್ಥೆ ಪಾತ್ರವಾಗಿದೆ. ರಾಜ್ಯದಲ್ಲೇ ಏಕೈಕ ಬೋನ್ ಮ್ಯಾರೋ (ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ) ಘಟಕ ಕಿದ್ವಾಯಿಯಲ್ಲಿ ಇದ್ದು, ಅಲೋಜೆನಿಕ್, ಆಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ.
ಕಿದ್ವಾಯಿ ಸಂಸ್ಥೆಯಲ್ಲಿ ರೋಗಿಗಳಿಗೆ ಅನುಕೂಲವಾಗಲು ಕೆಸಿಡಿಎಫ್ ಔಷಧಿ ಮಳಿಗೆ 24ಗಂಟೆಯೂ ಔಷಧ ಮಳಿಗೆ ತೆರೆಯಲಾಗಿದೆ. ಕೆಎಸ್ಆರ್‌ ಟಿಸಿ ನೌಕರರಿಗೆ ಕ್ಯಾಷ್‌ ಲೆಸ್‌ ಚಿಕಿತ್ಸೆ ನೀಡಲೂ ತೀರ್ಮಾನಿಸಲಾಗಿದೆ. ಬಿಪಿಎಲ್ ಸೌಲಭ್ಯ ಇಲ್ಲದ ಕುಟುಂಬಗಳಿಗೆ ಹಾಗೂ ಹಣದ ಸಮಸ್ಯೆ ಇರುವವರಿಗೆ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ.

((()*BOX 1*))))

*ಏನಿದು ಡಾ ವಿಂಚಿ ಸರ್ಜಿಕಲ್ ಸಿಸ್ಟಮ್:?*
ಅಮೆರಿಕಾದ ಇನ್ಸಿಟ್ಯೂಟ್ ಸರ್ಜಿಕಲ್ ರೀಸರ್ಚ್ ಸಂಸ್ಥೆಯು ಡಾ.ವಿಂಚಿ ಸರ್ಜಿಕಲ್ ಸಿಸ್ಟಮ್ ರೋಬೊಟಿಕ್ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಡಾ.ವಿಂಚಿ ಎಕ್ಸ್ಐ ಎಂಬುದು ಸುಧಾರಿತ ಆವೃತ್ತಿಯಾಗಿದೆ. ಈ ಯಂತ್ರವನ್ನು ಕಿದ್ವಾಯಿ ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಸರ್ಜನ್ ಕನ್ಸೋಲ್, ಪೇಷಂಟ್ ಕಾರ್ಟ್, ವಿಷನ್ ಕಾರ್ಟ್ ಎಂಬ ವಿಭಾಗಗಳಿವೆ. ಪೇಷೆಂಟ್ ಕಾರ್ಟ್ ಯಂತ್ರವನ್ನು ಬಳಸಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಹೇಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂಬ ಸೂಚನೆಗಳನ್ನು ಸರ್ಜನ್ ಕನ್ಸೋಲ್‌ ನಲ್ಲಿ ಕುಳಿತ ವೈದ್ಯರು ನೀಡುತ್ತಾರೆ. ವೈದ್ಯರ ಸೂಚನೆ ಮೇರೆಗೆ ಪೇಷಂಟ್ ಕಾರ್ಟ್ ಯಂತ್ರವು ಕಾರ್ಯ ನಿರ್ವಹಿಸುತ್ತದೆ. ಶಸ್ತ್ರ ಚಿಕಿತ್ಸೆಯ ಪ್ರತಿಯೊಂದು ಮಾಹಿತಿಯೂ ವಿಷನ್ ಕಾರ್ಟ್‌ ನಲ್ಲಿ ದಾಖಲಾಗುತ್ತದೆ. ಎಲ್ಇಡಿ ಪರದೆಯಲ್ಲಿ ಕಾಣಿಸುತ್ತದೆ. ಪೇಷಂಟ್ ಕಾರ್ಟ್ ಯಂತ್ರವನ್ನು ರೋಗಿಯ ದೇಹದ ನಿರ್ದಿಷ್ಟ ಭಾಗದಲ್ಲಿ ಇಡಲಾಗುತ್ತದೆ. ಈ ಯಂತ್ರದಲ್ಲಿರುವ ಕೈಗಳ ಸಹಾಯದಿಂದ ಸಣ್ಣ ರಂಧ್ರಗಳನ್ನು ಕೊರೆಯಲಾಗುತ್ತದೆ. ಈ ರಂಧ್ರಗಳ ಮೂಲಕ ದೇಹಕ್ಕೆ ಸ್ಟೀಲ್ ರಾಡ್‌ ಗಳನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

((((*BOX 2*))))

*ಸಚಿವ ಶರಣ್ ಪ್ರಕಾಶ್ ಪಾಟೀಲ್ ಶ್ಲಾಘನೆ:*
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೋಬೊಟಿಕ್ ಶಸ್ತ್ರ ಚಿಕಿತ್ಸೆ ಪೂರೈಸಿರುವುದು ಶ್ಲಾಘನೀಯ. ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ವಿಶ್ವ ದರ್ಜೆಯ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ದಿ , ಜೀವನೋಪಾಯ ಇಲಾಖೆ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್
ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯು ನೂತನ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಶೀಘ್ರಗತಿಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ರೋಬೊಟಿಕ್ ತಂತ್ರಜ್ಞಾನದಿಂದ 9 ವರ್ಷದಲ್ಲಿ 1 ಸಾವಿರ ಶಸ್ತ್ರ ಚಿಕಿತ್ಸೆ ನೀಡಿರುವುದು ಇತಿಹಾಸವಾಗಿದೆ. ರೋಗಿಗಳ ಆರೈಕೆಯಲ್ಲಿ ಕಿದ್ವಾಯಿ ಸಂಸ್ಥೆ ಮುಂಚೂಣಿಯಲ್ಲಿದೆ. ಅಲ್ಲದೇ ನಮ್ಮ ಸಂಸ್ಥೆಯು ವಿಶ್ವಮಟ್ಟದಲ್ಲಿ ಹಾಗೂ ದೇಶದಲ್ಲಿಯೇ ಭಾರತದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಿದ್ವಾಯಿ ಸಂಸ್ಥೆಯ ಸಾಧನೆ ಗಮನಾರ್ಹ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು