ಇತ್ತೀಚಿನ ಸುದ್ದಿ
ಕೇಸರಿ ಫ್ರೆಂಡ್ಸ್ ನಿಂದ ‘ನಮ್ಮ ನಡೆ ಪೊಳಲಿ ಅಮ್ಮನಡೆ’ ಪಾದಯಾತ್ರೆ
03/12/2023, 22:35

ಕಾಪೆಟ್ಟು(reporterkarnataka.com):ಕೇಸರಿ ಫ್ರೆಂಡ್ಸ್ ಪಡು ಕಾಪೆಟ್ಟು, ಬೊಂಡಂತಿಲ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನಮ್ಮ ನಡೆ ಪೊಳಲಿ ಅಮ್ಮನಡೆ’ ಪಾದಯಾತ್ರೆಯು ಶ್ರೀ ಪಾಂಡುರಂಗ ಭಜನಾ ಮಂದಿರ ಕಾಪೆಟ್ಟುವಿನಿಂದ ಪ್ರಾರಂಭವಾಯಿತು.
ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ಪಾದಯಾತ್ರೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭಾಗವಹಿಸಿ ಶ್ರೀ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಆಶೀರ್ವಾದ ಪಡೆದರು.