ಇತ್ತೀಚಿನ ಸುದ್ದಿ
ಕೇರಳದಲ್ಲಿ ಬಂಧನಕ್ಕೀಡಾದ ಶಂಕಿತ ನಕ್ಸಲ್ ಶೃಂಗೇರಿ ಪೊಲೀಸರಿಗೆ ಹಸ್ತಾಂತರ: 14 ದಿನಗಳ ನ್ಯಾಯಾಂಗ ಬಂಧನ
17/02/2024, 15:04
ಸಂತೋಷ್ ಅತ್ತಿಗೆರೆಚಿಕ್ಕಮಗಳೂರು
info.reporterkarnataka@gmail.com
ಕೇರಳದಲ್ಲಿ ಬಂಧನಕ್ಕೀಡಾದ ಕಾಫಿನಾಡ ಶಂಕಿತ ನಕ್ಸಲ್ ಶ್ರೀಮತಿ ಅವರಿಗೆ ಎನ್.ಆರ್.ಪುರ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಶ್ರೀಮತಿ ಮೇಲೆ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಸುಲಿಗೆ,ಪೊಲೀಸರಿಗೆ ಸಪೋರ್ಟ್ ಮಾಡದಂತೆ ಬೆದರಿಸಿದ್ದು ಸೇರಿ ವಿವಿಧ ಪ್ರಕರಣಗಳು ಅವರ ಮೇಲಿವೆ.
ಕೇರಳದಲ್ಲಿ ಬಂಧನವಾಗಿದ್ದ ಶ್ರೀಮತಿ ಕಾರ್ಕಳ ಪೊಲೀಸರ ವಶಕ್ಕೆ ನೀಡಲಾಗಿತ್ತು. ಕಾರ್ಕಳ ಪೊಲೀಸರು ಶೃಂಗೇರಿ ಪೊಲೀಸರು ಹಸ್ತಾಂತರಿಸಿದ್ದರು.
ಶ್ರೀಮತಿ ಅವರನ್ನು ಎನ್.ಆರ್.ಪುರ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.