5:21 AM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕೇರಳ ಸ್ಫೋಟಕ್ಕೆ ಅತೀಯಾದ ತುಷ್ಟೀಕರಣದ ರಾಜಕಾರಣವೇ ಕಾರಣ: ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ

29/10/2023, 20:08

ಮಂಗಳೂರು(reporter Karnataka.com): ಓಟು ಬ್ಯಾಂಕ್ ರಾಜಕಾರಣ ಹಾಗೂ ಅಲ್ಪಸಂಖ್ಯಾತ ಸಮುದಾಯದ ತುಷ್ಟೀಕರಣದ ಪರಿಣಾಮ ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಎಡಪಕ್ಷಗಳು ಹಾಗೂ ಮುಸ್ಲಿಂ ಲೀಗ್ ನಂತಹ ಪಕ್ಷಗಳು ಎಡಬಿಡಂಗಿ ನೀತಿಯನ್ನು ಇನ್ನಾದರೂ ನಿಲ್ಲಿಸಬೇಕು.ಕಣ್ಣಿದ್ದು ಕುರುಡನಂತೆ ವರ್ತಿಸಿದರೆ ಮತ್ತಷ್ಟು ಬಾಂಬ್ ಸ್ಫೋಟವಾಗುದು ಖಚಿತ.
ಕೇರಳ ಉಗ್ರರ ಸ್ಲೀಪರ್ ಸೆಲ್ ಆಗಿ ಪರಿವರ್ತನೆಯಾಗಿದ್ದು ದೇಶದ್ರೋಹಿ ಸಂಘಟನೆಗಳು ಇಲ್ಲಿಂದಲೇ ಕಾರ್ಯಾಚರಿಸುತ್ತಿವೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಕೇರಳ ಲಿಂಕ್ ಕೇಳಿ ಬಂದಿತ್ತು.
ಇಷ್ಟೆಲ್ಲಾ ಅದರೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಗ್ರರ ಪರವಾದ ಹೇಳಿಕೆ ನೀಡುತ್ತಲೇ ಬಂದಿತ್ತು ಮಾತ್ರವಲ್ಲ.ರಾಜ್ಯದಲ್ಲಿ ಬೇರೆ ಬೇರೆ ಕಡೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪಾಲ್ಗೊಂಡವರ ಮೇಲಿನ ಕೇಸು ಹಿಂಪಡೆಯಲೂ ಮುಂದಾಗಿದೆ.
ಇದೆಲ್ಲಾ ಜಿಹಾದಿ ಮನಸ್ಥಿತಿಯ ಕಿರಾತಕರು ಮತ್ತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ ಎಂದರು.
ಪ್ರಕರಣದ ಕುರಿತು ಕೂಡಲೇ ಎನ್ ಐ ಎ ತನಿಖೆ ನಡೆಸಬೇಕು.
ಭಾರತ ಇಸ್ರೇಲ್ ಗೆ ಬೆಂಬಲ ನೀಡಿದ ಕಾರಣ ಸ್ಫೋಟವಾಯಿತೇ
ಎಂಬುದರ ಬಗ್ಗೆ ಕೂಲಂಕುಷ ತನಿಖೆ ಅಗತ್ಯ. ಈ ನಿಟ್ಟಿನಲ್ಲಿ ಇದರ ತನಿಖೆಯನ್ನು ಎನ್ ಐ ಗೆ ಒಪ್ಪಿಸಬೇಕು ಎಂದು ಹೇಳಿಕೆಯಲ್ಲಿ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು