ಇತ್ತೀಚಿನ ಸುದ್ದಿ
ಕೇರಳ ಕೊಲೆ- ದರೋಡೆ ಪ್ರಕರಣ: ಕೊಡಗು – ದಕ್ಷಿಣ ಕನ್ನಡ ಗಡಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಆರೋಪಿಗಳು ಎಸ್ಕೇಪ್
19/09/2025, 13:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳದಲ್ಲಿ ನಡೆದ ಕೊಲೆ ಹಾಗೂ ದರೋಡೆ ಪ್ರಕರಣದ ಆರೋಪಿಗಳು ಕೊಡಗು- ದಕ್ಷಿಣ ಕನ್ನಡ ಗಡಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆದ ಘಟನೆ ನಡೆದಿದೆ.
ಕೇರಳದ ಪಾಲಕಾಡುನಲ್ಲಿ ಕಳವು ಮತ್ತು ಕೊಲೆ ಪ್ರಕರಣ ದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ಸಿದ್ದವಾಗಿದ್ದ ಬೆನ್ನಲ್ಲೇ ಪೊಲೀಸರಿಗೆ ಸಿಗದೆ ಪರಾರಿ ಆದ ಘಟನೆ ನಡೆದಿದೆ. ದರೋಡೆ ಆರೋಪಿಗಳು ಕೊಡಗಿನಲ್ಲಿ ಸಂಚಾರಿಸುತ್ತಿರುವ ಬಗ್ಗೆ ಟ್ರ್ಯಾಪ್ ಮಾಡಿದ್ದ ಪೊಲೀಸರು ದಕ್ಷಿಣ ಕನ್ನಡದ ಸುಳ್ಯ ಮಾರ್ಗವಾಗಿ ತೆರಳುವ ವಾಹನವನ್ನು ಹಿಡಿಯಲು ಸಂಪಾಜೆ ಬಳಿಯ ಕಲ್ಲುಗುoಡಿ ಸೇತುವೆ ಬಳಿ ಪೊಲೀಸರು ಸಜ್ಜಗಿದ್ದರು, ಕಲ್ಲುಗುoಡಿ ಔಟ್ ಪೋಸ್ಟ್ ಬಳಿ ಆರೋಪಿಗಳು ಇದ್ದ ಕಪ್ಪು ಬಣ್ಣದ ಮಹಿಂದ್ರಾ ತಾರ್ ದಾಟು ತ್ತಿದ್ದಂತೆ ಅಲರ್ಟ್ ಆಗಿದ್ದ ಮಾಹಿತಿ ಅದೇಗೋ ಅರಿತ ದರೋಡೆಕೋರರು, ದೇವರಕೊಲ್ಲಿ ಬಳಿ ವಾಹನ ನಿಲ್ಲಿಸಿ ಪರಾರಿ ಆಗಿದ್ದಾರೆ.ಈ ಕೃತ್ಯದಲ್ಲಿ ಗಂಡ ಹೆಂಡತಿ ಭಾಗಿಯಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೇರಳದ ಪೊಲೀಸರು ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸರ ನೆರವು ಕೊರಿದ್ದಾರೆ.