5:54 AM Wednesday21 - January 2026
ಬ್ರೇಕಿಂಗ್ ನ್ಯೂಸ್
ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,…

ಇತ್ತೀಚಿನ ಸುದ್ದಿ

ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

10/08/2023, 17:09

ಮಂಗಳೂರು(reporterkarnataka.com): ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ದೇಶದ ಸ್ವಾವಲಂಬನೆ ಮತ್ತು ಭಾರತೀಯರ ಸ್ವಾತಂತ್ರ್ಯ ರಕ್ಷಣೆಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ದೇಶದಾದ್ಯಂತ, ಕ್ವಿಟ್ ಇಂಡಿಯಾ ದಿನವಾದ ಇಂದು ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದೆದುರು ಪ್ರತಿಭಟನಾ ಪ್ರದರ್ಶನ ನಡೆಯಿತು.


ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಕೇಂದ್ರ ಸರ್ಕಾರ ದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ಭರಿತರಾಗಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರವರು, ಕಳೆದ ಒಂಭತ್ತು ವರ್ಷಗಳಿಂದ ದೇಶವನ್ನಾಳುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಸಾರ್ವಜನಿಕ ಸೊತ್ತುಗಳನ್ನು ಖಾಸಗೀಕರಣಗೊಳಿಸುತ್ತಿದ್ದಾರೆ. ವಿದೇಶಿಪರ, ಬಂಡವಾಳಶಾಹಿಪರ ನೀತಿಗಳನ್ನು ತನ್ನ ಮತ್ತು ತನ್ನ ಪಕ್ಷಕ್ಕೋಸ್ಕರ ದೇಶದಲ್ಲಿ ಜ್ಯಾರಿಗೊಳಿಸಿ ಜನಸಾಮಾನ್ಯರ, ಕಾರ್ಮಿಕರ ಹಿತವನ್ನು ಕಡೆಗಣಿಸಿ, ದೇಶದ ಸ್ವಾತಂತ್ರ್ಯವನ್ನು, ಸ್ವಾವಲಂಬನೆಯನ್ನು ವಿದೇಶಿಗರಿಗೆ ಅಡವಿಡುತ್ತಿದ್ದಾರೆ. ಭಾರತೀಯರನ್ನು ಕಡೆಗಣಿಸಿ ಸದಾ ವಿದೇಶ ಸುತ್ತುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ‘ವಿದೇಶಿ ಗುರು’ ಆಗಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ ಯವರು ಮಾತನಾಡಿ, ಕೃಷಿ ನೀತಿಯನ್ನು ಹೆಮ್ಮೆಟ್ಟಿಸಿದ ರೈತರ ಚಳವಳಿ ಸರಕಾರಕ್ಕೆ ಎಚ್ಚರಿಕೆಯ ಘಂಟೆ’
ಕನಿಷ್ಟ ಕೂಲಿ, ತುಟ್ಟಿಭತ್ತೆಯನ್ನು ಮಾಲಕರಿಂದ ಜ್ಯಾರಿಮಾಡಿಸಲು ಆಗದ ಸರಕಾರಗಳು ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ವಿಫಲವಾಗಿದೆ. ದೇಶದ ಐಕ್ಯತೆ, ಘನತೆಯನ್ನು ರಕ್ಷಿಸಿ ಉಳಿಸಲು ಕಾರ್ಮಿಕರಿಗೆ ಹೋರಾಟವಲ್ಲದೆ ಬೇರೆ ದಾರಿ ಇಲ್ಲ. ಕೇಂದ್ರ ಸರಕಾರ ಜ್ಯಾರಿಗೊಳಿಸಲು ಅನುಮೋದಿಸಿದ ಕೃಷಿ ಕಾಯ್ದೆಗಳನ್ನು ಹೆಮ್ಮೆಟ್ಟಿಸಿದ ರೈತರ ಚಳವಳಿ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಎಚ್ಚರಿಸಿದರು.
`ಜನರಿಂದಾದ ಸರಕಾರದ ವಿರುದ್ಧ ಜನರ ಪ್ರತಿಭಟನೆಗೆ ಕೇಂದ್ರವೇ ಕಾರಣ’
ಜನರ ಹೋರಾಟಗಳಿಂದ ರೂಪುಗೊಂಡ ಹಲವಾರು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಈಗಿನ ಕೇಂದ್ರ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಜನರೇ ಸಂವಿಧಾನಬದ್ಧವಾಗಿ ಚುನಾಯಿಸಿದ ಸರಕಾರವೇ ಇಂದು ಜನರ ಮೇಲೆ ಸವಾರಿ ನಡೆಸುತ್ತಿದೆ. ಸರಕಾರದ ವಿರುಧ್ಧದ ಈ ಜನ ಪ್ರತಿಭಟನೆಗೆ ಕೇಂದ್ರ ಸರಕಾರವೇ ಕಾರಣ ಎಂದು ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಆರೋಪಿಸಿದರು.
`ನೋಟ್ ಬ್ಯಾನ್‌ನಿಂದ ಆರ್ಥಿಕತೆ ಕುಸಿತ’
ಕೇಂದ್ರ ಸರಕಾರ ಜ್ಯಾರಿಗೊಳಿಸಿದ ನೋಟ್ ಬ್ಯಾನ್ ತೀರ್ಮಾನವು ಅಪ್ರಬುದ್ಧ ಹಾಗೂ ಜನರ ಮೇಲೆ ಹೇರಿಕೆಯಾಗಿತ್ತು. ನೋಟು ಬ್ಯಾನ್‌ನಿಂದ ಕಪ್ಪು ಹಣ ನಿರ್ಮೂಲನೆ, ಭಯೋತ್ಪಾದನೆ ನಿಗ್ರಹ, ಆರ್ಥಿಕತೆ ಬೆಳೆಯುತ್ತದೆ ಎಂದು ಹೇಳಿದ ಕೇಂದ್ರದ ಆಡಳಿತದಾರರು ತನ್ನ ಪೇಲವ ತೀರ್ಮಾನದಿಂದ ದೇಶದ ಆರ್ಥಿಕತೆಯನ್ನು ಹಾಳು ಮಾಡಿದರು, ದೇಶದ ಆರ್ಥಿಕತೆ ಕುಸಿಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿದ್ದರಿಂದ ಉದ್ಯೋಗ ನಷ್ಟವಾಯಿತು. ದೇಶ ಕಾಯುವ ಯೋಧರಪರ ಎಂದು ಮಾತನಾಡುತ್ತಾ ರಕ್ಷಣಾ ಕ್ಷೇತ್ರವನ್ನು ಖಾಸಗೀಕರಿಸಲು ಹೊರಟಿರುವ ಕೇಂದ್ರ ಸರಕಾರದ ಅಧಿಕಾರದಲ್ಲಿ ಉಳಿಯಲು ಅರ್ಹವಲ್ಲ ಎಂದು ಎಐಬಿಇಎ ನೇತೃತ್ವದ ಬ್ಯಾಂಕ್ ಸಂಘಟನೆಗಳ ಮುಖಂಡ ಫಣೀಂದ್ರ ಟೀಕಿಸಿದರು.
`ಹನ್ನೆರಡು ಗಂಟೆಗಳ ಕೆಲಸದಿಂದ ಉದ್ಯೋಗ ನಷ್ಟ’
ಕಾರ್ಮಿಕ ವರ್ಗ ನಡೆಸಿದ ಅಂತಾರಾಷ್ಟಿçÃಯ ಹೋರಾಟದಿಂದ ಎಂಟು ಗಂಟೆ ಮಾತ್ರ ಕೆಲಸದ ಅವಧಿ ಎಂಬ ಕಾನೂನು ಜ್ಯಾರಿಯಾಯಿತು. ಆದರೆ ಇವತ್ತಿನ ಕೇಂದ್ರ ಸರಕಾರ ಈ ಅವಧಿಯನ್ನು 12 ಗಂಟೆಗಳಿಗೆ ಏರಿಸಿ ಮಾಲಕರಿಗೆ ಪೂರಕವಾದ ಕಾನೂನು ರೂಪಿಸಿತು. ಕೆಲವೊಂದು ರಾಜ್ಯಗಳು ಇದನ್ನು ವಿರೋಧಿಸಿದರೂ ಹಿಂದಿನ ಕರ್ನಾಟಕ ರಾಜ್ಯ ಸರಕಾರ ತರಾತುರಿಯಿಂದ ಜ್ಯಾರಿಗೊಳಿಸಿದೆ. ಸರಕಾರಗಳ ಈ ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ ಉದ್ಯೋಗ ನಷ್ಟವಾಗಲಿದೆ. ಸರಕಾರದ ಈ ನೀತಿಯನ್ನು ನಾವೆಲ್ಲ ವಿರೋಧಿಸಬೇಕಾಗಿದೆ ಎಂದು ಎಐಸಿಸಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕೆ.ಇ ಜನರಿಗೆ ಕರೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಎಐಟಿಯುಸಿ ನಾಯಕರಾದ ಬಿ.ಶೇಖರ್, ಎ.ಪ್ರಭಾಕರ್ ರಾವ್, ವಿ.ಕುಕ್ಯಾನ್, ಸುರೇಶ್ ಕುಮಾರ್ ಬಂಟ್ವಾಳ್, ಕರುಣಾಕರ್ ಮಾರಿಪಲ್ಲ, ಸುಲೋಚನಾ, ಮಮತ, ಶಮಿತಾ, ಕೇಶವತಿ, ಸಿಐಟಿಯು ನಾಯಕರಾದ ಬಾಲಕೃಷ್ಣ ಶೆಟ್ಟಿ, ಭಾರತಿ ಬೋಳಾರ. ಪದ್ಮಾವತಿ ಶೆಟ್ಟಿ, ಸದಾಶಿವ ದಾಸ್, ಜಯಂತ ನಾಯ್ಕ್, ಮುನೀರ್ ಕಾಟಿಪಲ್ಲ, ಇಂಟಕ್‌ನ ಮನೋಹರ್ ಶೆಟ್ಟಿ, ಎಐಸಿಸಿಟಿಯುನ ರಾಮಪ್ಪ ವಿಟ್ಲ, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಮುಂತಾದವರು ಹಾಜರಿದ್ದರು. ಎಲ್ಲರನ್ನೂ ಸ್ವಾಗತಿಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಇಂದಿನ ಚಳವಳಿಯ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಐಟಿಯುಸಿ ಜಿಲ್ಲಾ ಸಹಾಯಕ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು