9:41 AM Wednesday23 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಕೇಂದ್ರ ಬಜೆಟ್: ಬಿಹಾರ, ಆಂಧ್ರಕ್ಕೆ ಭಾರೀ ಕೊಡುಗೆ; ರಾಜ್ಯಗಳಿಗೆ ಬಡ್ಡಿರಹಿತ ಸಾಲ; ವಾತ್ಸಲ್ಯ ಯೋಜನೆ; ರೈತರಿಗೆ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ

23/07/2024, 14:55

ನವದೆಹಲಿ(reporterkarnataka.com): ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ, ಎರಡು ವರ್ಷದಲ್ಲಿ 1 ಕೋಟಿ ರೈತರಿಗೆ ನ್ಯಾಚುರಲ್ ಫಾರ್ಮಿಂಗ್​ಗೆ ನೆರವು, ಟಿಡಿಎಸ್‌ ತಡಾಗಿ ಪಾವತಿಸಿದರೆ ಇನ್ನು ಮುಂದೆ ದಂಡವಿಲ್ಲ, ಬಡವರ ಮೇಲಿನ ತೆರಿಗೆ ಹೊರೆ ಇಳಿಕೆ, ಮೂರು ಕ್ಯಾನ್ಸರ್‌ ಔಷಧಿಗಳಿಗೆ ಕಸ್ಟಮ್ಸ್‌ ಸುಂಕ ಇಲ್ಲ, ರೈತರಿಗಾಗಿ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ,
ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಭರ್ಜರಿ ಕೊಡುಗೆ.
ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನ ಮುಖ್ಯಾಂಶಗಳು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು.
ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಟಿಡಿಎಸ್‌ ತಡಾಗಿ ಪಾವತಿಸಿದರೆ ಇನ್ನು ಮುಂದೆ ದಂಡ ಇರುವುದಿಲ್ಲ. ಕೇಂದ್ರ ಸರಕಾರ
ಪಾವತಿ ವಿಧಾನವನ್ನು ಇನ್ನಷ್ಟು ಸರಳಗೊಳಿಸಿದೆ.
ಜಿಎಸ್‌ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಔಷಧ, ಮೆಡಿಕಲ್‌ ಉಪಕರಣಗಳು, ಮೂರು ಕ್ಯಾನ್ಸರ್‌ ಔಷಧಿಗಳನ್ನು ಕಸ್ಟಮ್ಸ್‌ ಸುಂಕದಿಂದ ಮುಕ್ತಗೊಳಿಸಲಾಗಿದೆ.
ಕೇಂದ್ರ ಬಜೆಟ್ ನಲ್ಲಿ ವಾತ್ಸಲ್ಯ ಯೋಜನೆ ಘೋಷಿಸಲಾಗಿದೆ. ಇದು ಬಾಲಕಿಯರಿಗೆ ಅನುಕೂಲವಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಯೋಜನೆ ಮೂಲಕ ಬಾಲಕಿಯರ ಹೆಸರಿನಲ್ಲಿ ಖಾತೆ ತೆರೆದು ಅವರ ಹೆಸರಿನಲ್ಲಿ ಹಣ ಜಮೆ ಮಾಡಲಾಗುತ್ತದೆ. ಕಾರ್ಮಿಕರಿಗಾಗಿ ಇ-ಶ್ರಮ ಪೋರ್ಟ್‌ ಆರಂಭ, ಭೂ ಅಧಾರ್‌ ಮೂಲಕ ಭೂ ದಾಖಲೆ ಡಿಜಿಟಲೀಕರಣ.
ಗಯಾ, ಬೋಧ್‌ಗಯಾ ಅಭಿವೃದ್ಧಿಗೆ ಒತ್ತು. ಒಡಿಶಾ ದೇಗುಲಗಳಿಗೆ ಸಹಾಯಹಸ್ತ. ಪ್ರವಾಸಿ ಸ್ಥಳವಾಗಿ ನಳಂದಾ ವಿವಿಯ ಅಭಿವೃದ್ಧಿ. ಬೋಧ್‌ಗಯಾ, ವಿಷ್ಣುಪಾದ ದೇವಸ್ಥಾನ ಕಾಶಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.
*ಬಿಹಾರಕ್ಕೆ ಬಂಪರ್:* ಬಿಹಾರಕ್ಕೆ ಒಟ್ಟು 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ
4 ಹೊಸ ಎಕ್ಸ್​​ಪ್ರೆಸ್ ಹೈವೇ ಪ್ರಸ್ತಾಪಿಸಲಾಗಿದೆ. ಬಿಹಾರಕ್ಕಾಗಿ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅಮೃತಸಹರ -ಗಯಾ ಎಕನಾಮಿಕ್ ಕಾರಿಡಾರ್ ನಿರ್ಮಾಣದ ಯೋಜನೆಗೆ ಈ ಬಾರಿ ಬಜೆಟ್​ನಲ್ಲಿ ಅನುದಾನ ಮೀಸಲು ಇಡಲಾಗಿದೆ.
*ಆಂಧ್ರಕ್ಕೂ ಭರ್ಜರಿ;* ಚಂದ್ರಬಾಬು ನಾಯ್ಡು ಆಡಳಿತವಿರುವ ಆಂಧ್ರಪ್ರದೇಶಕ್ಕೂ ಕೂಡ ವಿಶೇಷ ಅನುದಾನವನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ 15 ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.
ನಿರ್ಮಲಾ ಸೀತಾರಾಮನ್​ ಅವರು ರೈತರಿಗೂ ಸಿಹಿ ಸುದ್ದಿ ನೀಡಿದ್ದಾರೆ. ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲಿಟ್ಟಿದೆ. ಕೃಷಿ ಸಂಶೋಧನೆಯಲ್ಲಿ ಬದಲಾವಣೆಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಸಂಶೋಧನೆಗೆ ಮಹತ್ವ ಕೊಡಲಾಗಿದೆ.
2 ವರ್ಷದಲ್ಲಿ 1 ಕೋಟಿ ರೈತರಿಗೆ ನ್ಯಾಚುರಲ್ ಫಾರ್ಮಿಂಗ್​ಗೆ ನೆರವು ನೀಡಲು ಮುಂದಾಗಿದೆ. ತೈಲ ಬೀಜಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಹೆಚ್ಚು ಒತ್ತು, ಇದಲ್ಲದೆ ರೈತರಿಗಾಗಿ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಈ ಬಾರಿಯ ಬಜೆಟ್​ನಲ್ಲಿ ತಿಳಿಸಲಾಗಿದೆ.
1 ಸಾವಿರ ಇಂಡಸ್ಟ್ರಿಯಲ್ ತರಬೇತಿ ಕೇಂದ್ರಗಳ ಉನ್ನತೀಕರಣ, 20 ಲಕ್ಷ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆ,‌ ಮಹಿಳೆಯರಿಗಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳು
10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಎಜುಕೇಷನ್ ಲೋನ್​, ಸರ್ಕಾರಿ ಸೌಲಭ್ಯವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ, ವಾರ್ಷಿಕ 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

ಇತ್ತೀಚಿನ ಸುದ್ದಿ

ಜಾಹೀರಾತು