8:04 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಕೆಂಪುಗುಡ್ಡೆ ಇನ್ ಡೇಂಜರ್: ಅಮ್ಟಾಡಿ ಗ್ರಾಮದಲ್ಲಿ ಹೆದ್ದಾರಿ ಬದಿಯಲ್ಲೇ ಗುಡ್ಡ ಕುಸಿಯುವ ಭೀತಿ; ನಾಗರಿಕರಲ್ಲಿ ಹೆಚ್ಚಿದ ಆತಂಕ

16/07/2023, 13:42

ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ

info.reporterkarnataka@gmail.com
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ
ವಿಶಾಲವಾದ ಕೆಂಪುಗುಡ್ಡೆಯ ಮಧ್ಯೆ ಕೇರೆ ಹಾವಿನಂತೆ ಹಾದು ಹೋಗುವ ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿ ರಸ್ತೆ ಕಳೆದ ವಾರ ಸುರಿದ ಭಾರೀ ಮಳೆಗೆ ಹೆದ್ದಾರಿ ಬದಿಯಲ್ಲೇ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ರಸ್ತೆ ಬದಿಯಲ್ಲಿ ಉದ್ದಕ್ಕೆ ಸುಮಾರು 500 ಮೀಟರ್ ಉದ್ದದಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಅಷ್ಟು ಮಾತ್ರವಲ್ಲೇ ಗುಡ್ಡದ ನೇರ ಭಾಗದಲ್ಲೂ ಗುಡ್ಡ ಇಬ್ಬಾಗವಾಗಿರುವುದು ಕಾಣಿಸಿದೆ.ರಸ್ತೆಯಿಂದ ಕೆಳಗೆ ಇಳಿಜಾರು ಪ್ರದೇಶದಲ್ಲಿ ವಾಸ್ತವ್ಯ ಇರುವ ಮನೆಗಳು, ಕೃಷಿಭೂಮಿ ಇದೆ. ಇದಕ್ಕೆಲ್ಲ ಅಪಾಯವನ್ನು ತಂದೊಡ್ಡಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಜಗದಂಬಿಕಾ ಭಜನಾ ಮಂದಿರದ ಸಮೀಪದ ಗುಡ್ಡ ಬಿರುಕು ಕಂಡು ಬಂದಿದ್ದು, ಈ ಭಾಗದಲ್ಲಿ ಸಂಚರಿಸುವ ಗ್ರಾಮಸ್ಥರು ಆತಂಕಕ್ಕೊಳಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಡ್ಡವನ್ನು ಸಮತಟ್ಟು ಮಾಡಿದ ಪರಿಣಾಮ ಗುಡ್ಡದ ಮತ್ತೊಂದು ಬದಿಯಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಗುಡ್ಡೆ ಬಿರುಕು ಕಂಡು ಬಂದಂತೆ ಅಮ್ಟಾಡಿ ಪಂಚಾಯತ್‌ನಿಂದ ಸಾರ್ವಜನಿಕರಿಗೆ ತಿಳಿಯಪಡಿಸಲು ರಸ್ತೆ ಇರುವ ಎರಡು ಬದಿಯಲ್ಲೂ ಸೂಚನಾ ಫಲಕವನ್ನೂ ಹಾಕಿದ್ದಾರೆ.


ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ 2013ರಲ್ಲಿ ಸುಮಾರು 4 ಕೋಟಿ ಅನುದಾನದಲ್ಲಿ ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆಗೆ ಅಚ್ಚುಕಟ್ಟಾಗಿ ಸುಸಜ್ಜಿತ ರಸ್ತೆಯು ಗುಡ್ಡದಿಂದ ನೀರು ನಿರಂತರವಾಗಿ ಇಳಿದು ಬರುವುದರಿಂದ ರಸ್ತೆಯೂ ಹಾಳಾಗಿರುತ್ತದೆ. ಈ ಭಾಗದಿಂದ ಕಲ್ಪನೆಗೆ ಕೇವಲ 8 ಕಿ.ಮೀ. ದೂರ ಇರುವುದು. ಇಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ-ಮಂಗಳೂರು, ಫರಂಗಿಪೇಟೆ-ಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಕಲ್ಪನೆ-ಪೊಳಲಿ, ಕಟೀಲು ಹಾಗೂ ಬಜಪೆ ವಿಮಾನ ನಿಲ್ದಾಣವನ್ನೂ ತಲುಪಬಹುದು. ಬಂಟ್ವಾಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ಮಾರ್ಗವಾಗಿ ಮೇಲಿನ ಸ್ಥಳಗಳನ್ನು ತಲುಪುವುದು ಸುಲಭ ಸಾಧ್ಯವಾಗಿದೆ.
ಅಮ್ಟಾಡಿ ಗ್ರಾಮದ ಈ ರಸ್ತೆ ಗ್ರಾಮೀಣ ಭಾಗದಲ್ಲಿ ಮುಖ್ಯ ರಸ್ತೆಯಾಗಿರುತ್ತದೆ. ಈ ರಸ್ತೆಯಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಅಟೋ ರಿಕ್ಷಾದ ಮೂಲಕ ಪ್ರಯಾಣ ಮಾಡುತ್ತಾರೆ. ಖಾಸಗಿ ಸ್ಥಳವಾದರೂ ಹಚ್ಚ ಹಸುರಾಗಿರುವ ಕೆಂಪುಗುಡ್ಡ ಪ್ರದೇಶವನ್ನು ಉಳಿಸಿಕೊಳ್ಳುವುದು ಜನರ ಕರ್ತವ್ಯ. ಗುಡ್ಡದ ಮೇಲೆ ಮಣ್ಣು ಅಗೆತ, ಗುಡ್ಡ ಒಂದು ಬದಿಯಿಂದ ಕುಸಿಯಲು ಪ್ರಾರಂಭವಾದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಳೆ ಕೇವಲ ನಾಲ್ಕು ದಿನ ಬಂದಿರುವುದು. ಜೋರು ಮಳೆ ಇನ್ನು ಬರಬೇಕಷ್ಟೆ. ಮಳೆಯು ಎಡೆಬಿಡದೆ ಸುರಿಯಲು ಆರಂಭವಾದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.
ಕೆಂಪುಗುಡ್ಡೆಯಲ್ಲಿ ಬಿರುಕು ಕಂಡು ಬಂದಿರುವುದರಿಂದ ಅಮ್ಟಾಡಿ ಪಂಚಾಯತ್‌ನಿಂದ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಗೊತ್ತಾಗುವಂತೆ ಬ್ಯಾನರ್ ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಗಮನ ತಂದಿದ್ದು, ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಬಿರುಕು ಪರಿಶೀಲನೆ ಮಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಸ್ತೆ ಹಾಳಾಗದಂತೆ ಸೂಕ್ತ ಕ್ರಮ ಜರಗಿಸುವುದೆಂದು ಎಂದು
ಸುನೀಲ್ ಬಿ., (ಉಪಾಧ್ಯಕ್ಷರು, ಅಮ್ಟಾಡಿ ಗ್ರಾಮ ಪಂಚಾಯತ್) ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಬಿರುಕು ಬಿಟ್ಟಿರುತ್ತದೆ. ಗುಡ್ಡದಿಂದ ನಿರಂತರವಾಗಿ ರಸ್ತೆಯಲ್ಲೇ ನೀರು ಸಂಚರಿಸುತ್ತಿದೆ. ದಿನಂಪ್ರತಿ ಇದೇ ರಸ್ತೆಯಲ್ಲಿ ನಾವು ದ್ವಿಚಕ್ರ ವಾಹನದ ಮುಖಾಂತರ ಸಂಚರಿಸುತ್ತಾ ಇದ್ದೇವೆ. ಯಾವುದೇ ಗಂಡಾಂತರ ಬಾರದಂತೆ ಈ ಮಳೆಗಾಲ ಕಳೆಯಲಿ ಎಂಬುದೇ ನಮ್ಮ ಆಶಯ ಎನ್ನುತ್ತಾರೆ ಕಲ್ಪನೆಯ ನಿವಾಸಿ
ಉಮೇಶ್ ಅವರು.

ಇತ್ತೀಚಿನ ಸುದ್ದಿ

ಜಾಹೀರಾತು