ಇತ್ತೀಚಿನ ಸುದ್ದಿ
ಕೀಟನಾಶಕ ಕುಡಿದು 2 ವರ್ಷದ ಮಗು ದಾರುಣ ಸಾವು: ಜ್ಯೂಸ್ ಎಂದು ಗ್ರಹಿಸಿ ಸೇವಿಸಿದ ಕಂದಮ್ಮ
04/09/2023, 20:54

ಚನ್ನಪಟ್ಟಣ(reporterkarnataka.com): ರೇಷ್ಮೆ ಹುಳುವಿಗೆ ಸಿಂಪಡಿಸಲು ತಂದು ಇಟ್ಟಿದ್ದ ಕೀಟನಾಶಕವನ್ನು ಕುಡಿದು 2 ವರ್ಷದ ಕಂದಮ್ಮ ಸಾವನ್ನಪ್ಪಿದ ದಾರುಣ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತಪಟ್ಟ ಮಗುವನ್ನು ಯಶಾಂಕ್ ಕೆ.ಗೌಡ ಎಂದು
ತಿಳಿದು ಬಂದಿದೆ. ರೇಷ್ಮೆ ಹುಳುವಿಗೆ ಸಿಂಪಡಣೆ ಮಾಡಲು ಮನೆಯಲ್ಲಿ ತಂದಿಟ್ಟಿದ್ದ ಕ್ರೀಮಿನಾಶಕವನ್ನು ಜ್ಯೂಸ್ ಎಂದು ಗ್ರಹಿಸಿ ಮಗು ಸೇವಿಸಿದೆ ಎನ್ನಲಾಗಿದೆ.
ಅಸ್ವಸ್ಥಗೊಂಡ ಮಗುವಿಗೆ ಚನ್ನಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗುವು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.