ಇತ್ತೀಚಿನ ಸುದ್ದಿ
ಕಾವೂರು ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಪೂರ್ವಭಾವಿ ಸಭೆ
18/06/2024, 23:23

ಮಂಗಳೂರು(reporterkarnataka.com): ನಗರದ ಕಾವೂರು ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪ್ರಥಮ ಪೂರ್ವಭಾವಿ ಸಭೆ ಮಂಗಳೂರು ನಗರ ಶಾಸಕ ಡಾ. ವೈಭರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿ ಸಂಘ, ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಒಟ್ಟು ಸೇರಿ ಶತಮಾನೋತ್ಸವದ ರೂಪರೇಷೆಗಳನ್ನು ತಯಾರಿಸಬೇಕಾಗಿ ಸಲಹೆ ನೀಡಿದರು. ಸಭೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಕಾರ್ಪೊರೇಟರ್ ಸುಮಂಗಳ ಹಾಗೂ ಸ್ಥಳೀಯ ಮುಖಂಡರಾದ ಸೀತೇಶ್ ಕೊಂಡೆ, ಅಜಿತ್ ಪಳನೀರು, ನಿತೇಶ್ ಕಾವೂರು ಶ್ರೀನಿವಾಸ್ ಕಾವೂರು ಪೆಲ್ಸಿ ರೇಗೊ,ರಮೇಶ್ ಕಾವೂರು, ಕೃಷ್ಣಪ್ಪ ಕಲ್ಮಾಡಿ ಶಂಕರ್ ಕಾವೂರು, ಶಿವರಾಮ ಕಾವೂರು, ತುಳಸಿ ಕಾವೂರು ಮತ್ತು ಊರಿನ ಶಾಲಾಭಿಮಾನಿಗಳು ಭಾಗವಹಿಸಿದ್ದರು.