3:05 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಾವೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆ: ಪದ್ಮರಾಜ್ ಗೆಲುವಿಗೆ ಭಾರೀ ಜನಬೆಂಬಲ ವ್ಯಕ್ತ

28/03/2024, 20:47

ಸುರತ್ಕಲ್(reporterkarnataka.com): ಮಂಗಳೂರು ವಿಧಾನಸಭಾ ಕ್ಷೇತ್ರದ ಸುರತ್ಕಲ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ‌ ವತಿಯಿಂದ ಗುರುವಾರ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ ನಡೆಯಿತು.


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ಬಿಜೆಪಿಗೆ ಸೋಲಿನ ಭಯ ಈಗಲೇ ಶುರುವಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರಂಭಿಸಿದ್ದಾರೆ. ಆದರೆ ತಾನು ಇದುವರೆಗೆ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಕಾರ್ಯಕರ್ತರು ಜನರ ಬಳಿಗೆ ಹೋದಾಗ ತಲೆ ಏತ್ತಿ ಮಾತಾಡುವಂತೆ ಮಾಡುತ್ತೇನೆ. ಹಾಗಾಗಿ ಈ ಲೋಕಸಭಾ ಚುನಾವಣೆಯ ಗೆಲುವು ನಿಮ್ಮ ಗೆಲುವು ಎಂದರು.
ಹಿಂದು ಧರ್ಮದ ಜ್ಞಾನ, ಬೌದ್ಧ ಧರ್ಮದ ‌ಕರುಣೆ, ಕ್ರೈಸ್ತ ಧರ್ಮದ ಪ್ರೀತಿ, ಮಹಮ್ಮದ್ ಪೈಗಂಬರರ ಸಹೋದರತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ನಿರ್ಮಿಸೋಣ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಗುರುಪುರ ಹೋಬಳಿ ತನ್ನ ಮನೆ. ತನ್ನನ್ನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡುವಲ್ಲಿ ಈ ಕ್ಷೇತ್ರದ ಪಾತ್ರ ಮಹತ್ವದ್ದು ಎಂದ ಅವರು, ಈ ಬಾರಿ ಕಾರ್ಯಕರ್ತರ ಅಪೇಕ್ಷೆಯಂತೆ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ. ಶುದ್ಧ ಚಾರಿತ್ರ್ಯದ, ಯುವ ಉತ್ಸಾಹಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿ ಕೊಡಲೇಬೇಕು ಎಂದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಆಲಿ ಮಾತನಾಡಿ, ಈ ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಂತೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೇ ಬಂದರೆ ಮಹಾಲಕ್ಷ್ಮೀ ಯೋಜನೆ ನೀಡಲಾಗುವುದು. ಇದನ್ನು ಮನೆಮನೆಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಪದ್ಮರಾಜ್ ಅವರು ಬರುವಾಗ ಜನರು ಸೇರುವುದನ್ನು ನೋಡುವಾಗಲೇ ಜನರ ಉತ್ಸಾಹ, ಅಭ್ಯರ್ಥಿಯ ಒಲವು ಕಾಣುತ್ತದೆ. ಜನಾರ್ದನ ಪೂಜಾರಿ ಅವರ ಗರಡಿಯಲ್ಲಿ ಪಳಗಿ, ಕಾರುಣ್ಯದ ಕೆಲಸ ಮಾಡಿರುವ ಪದ್ಮರಾಜ್ ಅವರನ್ನು ಗೆಲ್ಲಿಸಲೇಬೇಕಾಗಿದೆ ಎಂದರು.
ಡಿ.ಕೆ. ಶಿವಕುಮಾರ್ ಅವರ ಶಿಷ್ಯ ತಾನು. ಕಳೆದ ಇಪ್ಪತ್ತೈದು ವರ್ಷದಿಂದ ಅವರ ಜೊತೆಗಿದ್ದೇನೆ. ಹಾಗೆಂದು ಅವರು ಮೊನ್ನೆ ಕರಾವಳಿಗೆ ಬಂದಾಗ ಅವರ ಬಳಿ ತಾನು ಹೋಗಿಲ್ಲ. ಕಾರಣ, ತಾನು ತನ್ನ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದೇನೆ. ನಾಯಕರು ಬಂದಾಗ ಅವರ ಜೊತೆ ಹೋಗಬೇಕು ಎಂದು ಅಂದುಕೊಳ್ಳಬೇಡಿ. ನಿಮ್ಮ ನಿಮ್ಮ ವಾರ್ಡ್, ಬ್ಲಾಕ್’ಗಳಲ್ಲಿ ಕೆಲಸ ನಿರ್ವಹಿಸಿ. ಇದೇ ನೀವು ನಿಮ್ಮ ನಾಯಕರಿಗೆ ನೀಡುವ ಗೌರವ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ಬು ಗೆಲ್ಲಿಸಿಕೊಡುವುದೇ ನಿಮ್ಮ ನಿಯತ್ತಾಗಿರಬೇಕು ಎಂದರು.
ಐವನ್ ಡಿಸೋಜ ಮಾತನಾಡಿ, ಪದ್ಮರಾಜ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದಂದಿನಿಂದ ಜಿಲ್ಲೆಯಲ್ಲಿ ಸಂಚಲನ ಆರಂಭವಾಗಿದೆ. ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿಕೊಂಡಿದೆ. ನಮ್ಮ ಅಭ್ಯರ್ಥಿಯಲ್ಲಿ ಯಾವುದೇ ನೆಗೇಟಿವ್ ಇಲ್ಲ. ಯಾವುದೇ ಟೀಕೆ ಮಾಡಲು ಅವಕಾಶ ಇಲ್ಲ. ಹಲವು ಸಾಮಾಜಿಕ ಕೆಲಸ ಮಾಡಿದ್ದಾರೆ. ಆದ್ದರಿಂದ ನಾವುಗಳು ಬೂತ್ ಬೂತ್’ಗೆ ತೆರಳಿ ಪ್ರಚಾರ ಕಾರ್ಯ ನಡೆಸಬೇಕು ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜನಾರ್ದನ ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾಗಲೇ ಜಿಲ್ಲೆಯ ಚುನಾವಣಾ ಸಮನ್ವಯಕಾರರಾಗಿ ಕೆಲಸ ನಿರ್ವಹಿಸಿಕೊಂಡು ಬಂದವರು. ವಕೀಲರಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
ಗ್ಯಾರೆಂಟಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಿ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಲ್ಲಿವರೆಗೆ ಗ್ಯಾರೆಂಟಿ ಯೋಜನೆ ಇರುತ್ತದೆ ಎಂದರು.
ಪ್ರಮುಖರಾದ ರಾಕೇಶ್ ಮಲ್ಲಿ, ಸದಾಶಿವ ಶೆಟ್ಟಿ, ಪೃಥ್ವಿರಾಜ್, ಸುರೇಂದ್ರ ಕಾಂಬ್ಳಿ, ಜಯಶೀಲಾ ಅಡ್ಯಂತಾಯ, ಶಶಿಧರ್ ಹೆಗ್ಡೆ, ಗಿರೀಶ್ ಆಳ್ವ, ಎಂ.ಜಿ. ಹೆಗಡೆ, ಅನಿಲ್ ಕುಮಾರ್, ಹರಿನಾಥ್, ಕೃಷ್ಣಪ್ಪ ಅಮೀನ್, ಕವಿತಾ ಸನಿಲ್, ನವೀನ್ ಡಿಸೋಜಾ, ಶ್ಯಾಲೆಟ್ ಪಿಂಟೋ, ಪ್ರತಿಭಾ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು