ಇತ್ತೀಚಿನ ಸುದ್ದಿ
ಕಠಿಣ ಪರಿಶ್ರಮ ಮತ್ತು ಆತ್ಮ ವಿಶ್ವಾಸದಿಂದ ಸಿಎ ಪದವಿಯನ್ನು ಪಡೆದ ಕೆನರಾ ಸಂಧ್ಯಾ ಕಾಲೇಜು ವಿದ್ಯಾರ್ಥಿಗಳಿಗೆ ಸನ್ಮಾನ
28/02/2022, 22:10

ಮಂಗಳೂರು(reporterkarnataka.com); ಡಿಸೆಂಬರ್ 2021ನೇ ವರ್ಷದಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆನರಾ ಸಂಧ್ಯಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಗೋಕುಲ್ ಪೈ, ಪೂರ್ಣಿಮಾ ರಾವ್ ಹಾಗೂ ಸಂಜನಾ ಪೈ ಅವರಿಗೆ ಸನ್ಮಾನ ಮಾಡಲಾಯಿತು.
“ನಾವು ನಿಷ್ಠಾವಂತರು ಮತ್ತು ಶ್ರಮದಾಯಕರಾಗಿದ್ದರೆ ಏನನ್ನೂ ಸಾಧಿಸಬಹುದು. ನಮ್ಮಲ್ಲಿ ಆತ್ಮವಿಶ್ವಾಸ , ದೇವರಲ್ಲಿ ನಂಬಿಕೆ ಮತ್ತು ಭಕ್ತಿ ಇದ್ದರೆ ಯಾವ ಎತ್ತರಕ್ಕಾದರೂ ನಾವು ತಲುಪಬಹುದು. ಮೊದಲಾಗಿ ನಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಬೇಕು ಮತ್ತು ನಾವು ಮಾಡುವ ಕಾರ್ಯದಲ್ಲಿ ನಂಬಿಕೆ ಇರುವುದು ಮುಖ್ಯ” ಎಂದು ಕಾಲೇಜಿನ ಸಂಚಾಲಕ ಸಿಎ ಜಗನ್ನಾಥ ಕಾಮತ್ ನುಡಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಗುಟ್ಟನ್ನು ಎಲ್ಲಾ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.
ಕಾಲೇಜಿನ ವಿದ್ಯಾರ್ಥಿನಿ ಸಹನಾ ಪ್ರಾರ್ಥನೆಗೈದರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಲಾ ಕಾಮತ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕಾವ್ಯಶ್ರೀ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸ್ಮಿತಾ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.