4:13 PM Tuesday22 - July 2025
ಬ್ರೇಕಿಂಗ್ ನ್ಯೂಸ್
Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ…

ಇತ್ತೀಚಿನ ಸುದ್ದಿ

ಕಟೀಲು ಎಸ್ ಡಿಪಿಟಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ಯಾಪ್ಸ್ ಸೈನ್ಸ್ ಪಾರ್ಕ್ ಉದ್ಘಾಟನೆ

21/11/2024, 19:02

ರಾಯಿ ರಾಜಕುಮಾರ ಮೂಡುಬಿದಿರೆ

info.reporterkarnataka@gmail.com

ಮಂಗಳೂರು ತಾಲೂಕಿನ ಕಟೀಲು ಎಸ್ ಡಿಪಿಟಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ಯಾಪ್ಸ್ ಸಂಸ್ಥೆಯವರಿಂದ ಸೈನ್ಸ್ ಪಾರ್ಕ್ ಹಾಗೂ ಗುರು ಪೂಜನ ಕಾರ್ಯಕ್ರಮ ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು ವತಿಯಿಂದ ನವೆಂಬರ್ 20ರಂದು ನಡೆಯಿತು. ಪದವಿಪೂರ್ವ ಕಾಲೇಜಿನ ಬದಿಯಲ್ಲಿ ಕ್ಯಾಪ್ಸ್ ಸೈನ್ಸ್ ಪಾರ್ಕ್ ಅನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿ ಉದ್ಘಾಟಿಸಿದರು.


ತರುವಾಯ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟಿಲಿನ ವೇ. ಮೂ. ವಾಸುದೇವ ಅಸ್ರಣ್ಣ ಮಾತನಾಡಿ, ಕಾಲೇಜಿನಲ್ಲಿಯೇ ಕಲಿತ ವ್ಯಕ್ತಿ ಈ ಮಹಾನ್ ಕಾರ್ಯವನ್ನು ಮಾಡಿರುವುದಕ್ಕೆ ಶುಭ ಹಾರೈಸಿದರು.
ಹಳೆ ವಿದ್ಯಾರ್ಥಿಯ ಸಾಧನೆ ಈಗಿನ ಮಕ್ಕಳಿಗೆ ಪ್ರೇರಕ ಎಂದು ವೇ ಮೂ ಅನಂತಪದ್ಮನಾಭ ಆಸ್ರಣ್ಣ ಶುಭ ಹಾರೈಸಿದರು. ವೇ.ಮೂ ಹರಿನಾರಾಯಣ ಅಸ್ರಣ್ಣ ಮಾತನಾಡಿ ವಾಮನ ಮೂರ್ತಿಯಂತಿದ್ದ ಚಂದ್ರಶೇಖರ ಶೆಟ್ಟಿ ತ್ರಿ ವಿಕ್ರಮನಂತೆ ಬೆಳೆದು ಕಾಲೇಜಿಗೆ ಉತ್ತಮ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕನ್ನಡಿಯಂತೆ ಸ್ವಚ್ಛ ಸಾಧಕನಾಗಿ ಮೆರೆಯುತ್ತಿರುವ ಇವರು ವಿಜ್ಞಾನದ ಅತ್ಯುತ್ತಮವಾದಂತಹ ಉಪಕರಣಗಳನ್ನು ಸೈನ್ಸ್ ಪಾರ್ಕ್ ನಲ್ಲಿ ಅಳವಡಿಸಿ ಕಾಲೇಜಿಗೆ ಮಾತ್ರವಲ್ಲ ಇಡೀ ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸಿ ಕೊಟ್ಟಿರುವುದು ಪ್ರಶಂಸನೀಯ ಎಂದರು.
ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಕ್ಯಾಪ್ಸ್ ಫೌಂಡೇಶನ್ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲರೂ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಪರ್ಯಾಯ ವಸ್ತುಗಳನ್ನು ಉಪಯೋಗಿಸಬೇಕೆಂದು ಚಂದ್ರಶೇಖರ ಶೆಟ್ಟಿ ಕೇಳಿಕೊಂಡರು. ನವರಸಗಳನ್ನು ತೋರಿಸಿಕೊಡುವ ಯಕ್ಷಗಾನಕ್ಕೂ ಪ್ರಾಧಾನ್ಯತೆಯನ್ನು ಕೊಡಬೇಕೆಂದು ಆಶಿಸಿದರು. ಅವರಿಗೆ ಸಾಕಷ್ಟು ಉತ್ತೇಜನವನ್ನು ಕೊಟ್ಟ ಡಾ. ಕೃಷ್ಣ ಕಾಂಚನ್ ಹಾಗೂ ನಾಗೇಶ್ ರಾವ್ ಅವರನ್ನು ಅಭೂತಪೂರ್ವಾಗಿ ಗುರು ಪುರಸ್ಕಾರದೊಂದಿಗೆ ಸನ್ಮಾನಿಸಿದರು.
ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಸ್ವಾಗತಿಸಿದರು. ಅಧ್ಯಾಪಕ ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು