8:42 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಟೀಲು: 5ರಂದು ಶಿಕ್ಷಕ ಸಾಹಿತಿಗಳ ರಾಜ್ಯ ಸಮ್ಮೇಳನ; ಆಸ್ರಣರಿಗೆ ದುರ್ಗಾಪ್ರಸಾದ, ಪುನರೂರುಗೆ ಚುಟುಕು ದಾಸೋಹಿ ಗೌರವ ಪುರಸ್ಕಾರ

03/09/2024, 22:27

ಮಂಗಳೂರು(reporterkarnataka.com): ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ದ.ಕ. ಜಿಲ್ಲಾ ಸಮಿತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ವತಿಯಿಂದ ಸೆ.5ರಂದು ಕಟೀಲು ಕ್ಷೇತ್ರದಲ್ಲಿ ಶಿಕ್ಷಕ ದಿನಾಚರಣೆ ಮತ್ತು ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನ
ಹಿರಿಯ ಶಿಕ್ಷಕ, ಸಾಹಿತಿ ಹೊಸಕೋಟೆಯ ಶ್ರೀಕಾಂತ್ ಕೆ.ವಿ. ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ
ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ. ದಿನದ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ , ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
*ರಾಜ್ಯ ಗೌರವ ಪುರಸ್ಕಾರ:*
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣರಿಗೆ ‘ದುರ್ಗಾಪ್ರಸಾದ’ , ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಚುಟುಕು ದಾಸೋಹಿ ಗೌರವ ಪುರಸ್ಕಾರ ನೀಡಲಾಗುವುದು.
ಚುಟುಕು ಚಿಣ್ಮಯಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿಗಳು:
ಶಿಕ್ಷಕ ಸಾಹಿತಿಗಳಾದ ವಿ.ಬಿ. ಕುಳಮರ್ವ ಕಾಸರಗೋಡು , ಡಾ. ಸುರೇಶ ನೆಗಳಗುಳಿ ಮಂಗಳೂರು , ಮುನಿರಾಜ ರೆಂಜಾಳ ಮೂಡಬಿದ್ರೆ, ಜಯಾನಂದ ಪೆರಾಜೆ ದಕ್ಷಿಣ ಕನ್ನಡ , ಶಾಂತ ಪುತ್ತೂರು , ಸುಮಲತಾ ಬಿ.ಎಸ್. ಬಾಣಸವಾಡಿ , ಡಾ. ಪ್ರಭುಸ್ವಾಮಿ ಹಾಲಿವಾಡಿ ಮಠ ಹಂಸಭಾವಿ, ವಿದ್ವಾನ್ ರಘುಪತಿ ಭಟ್ ಉಡುಪಿ, ರವಿರಾಜ ತಿರುಮಲೆ ಹಾನಗಲ್ , ರವೀಂದ್ರ ಶೆಟ್ಟಿ ಬಳಂಜ ಅವರಿಗೆ ಚುಟುಕು ಚಿಣ್ಮಯಿ ರಾಜ್ಯ ಶಿಕ್ಷಕ ಸಾಹಿತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇತ್ತೀಚಿನ ಸುದ್ದಿ

ಜಾಹೀರಾತು