1:29 PM Thursday15 - January 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ…

ಇತ್ತೀಚಿನ ಸುದ್ದಿ

ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ; ರಥೋತ್ಸವ

07/02/2025, 09:50

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಸಮಾಜವು ಸಂಘಟಿತವಾಗಬೇಕು. ಸಂಘಟನೆಗಾಗಿ ಗುರುಮಠ, ಸುಸಜ್ಜಿತ ಸಭಾ ಮಂಟಪ ಹಾಗೂ ಇತರ ವ್ಯವಸ್ಥೆಗಳಿಗೆ ಹಾಗೂ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಆಡಳಿತ ಮಂಡಳಿಯೊದಿಗೆ ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದು ಆಡಳಿತ ಮೊಕ್ತೇಸರ ಕಲ್ಲೇಗ ಸಂಜೀವ ನಾಯಕ್ ಹೇಳಿದರು.
ಅವರು ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವ, ನೂತನ ಬ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ಮನೀಶ್ ಜಿ. ದಾಬೋಲ್‌ಕರ್ ಅಧ್ಯಕ್ಷರು ಗೌಡ್ ಬ್ರಾಹ್ಮಣ ಸಭಾ ಗೋರೆಗಾವ್, ವಿಕಾಸ್ ವಾಲ್‌ವಾಲ್‌ಕರ್ ಸಮರ್ಥ್ ಡೆವಲಪ್ಪರ್ಸ್ ಮುಂಬೈ, ಡಾ. ಜಯಪ್ರಕಾಶ್ ಎಂ., ಸಂದೀಪ್ ಪ್ರಭು, ಜಯಂತ್ ನಾಯಕ್ ಬೆಂಗಳೂರು, ಸಂಜಯ್ ಪ್ರಭು ಮಂಗಳೂರು, ಮುಕುಂದ ಪ್ರಭು, ಆನುವಂಶಿಕ ಮೊಕ್ತೇಸರ ಕಂಟಿಕ ಗೋಪಾಲ ಶೆಣೈ , ಕಾರ್ಯದರ್ಶಿ ಶಾಂತಾರಾಮ ಶೆಣೈ ಹಾಗೂ ಆಡಳಿತ ಮಂಡಳಿ , ಜೀರ್ಣೋದ್ಧಾರ ಸಮಿತಿ , ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌಡ್ ಬ್ರಾಹ್ಮಣ ಸಭಾ ಗೋರೆಗಾಂ ಇದರ ಅಧ್ಯಕ್ಷ ಮನೀಶ್ ಜಿ. ದಾಬೋಲ್‌ಕರ್ ಮಾತನಾಡಿ ಕುಡಾಲ ಗೌಡ್ ಬ್ರಾಹ್ಮಣ ಸಮಾಜದ ಮತ್ತು ಕುಟುಂಬ ವ್ಯವಸ್ಥೆಯ ಮತ್ತು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಮಾತನಾಡಿದರು. ಗುರು ಶಿಷ್ಯ ಪರಂಪರೆಯೊಂದಿಗೆ ಸ್ವಾಭಿಮಾನದಿಂದ ಸಮಾಜವು ಶಕ್ತಿ ಶಾಲಿಯಾಗಬೇಕೆಂದರು.


ಡಾ.ಜಯಪ್ರಕಾಶ್ ಎಮ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಡಾಲ್ ದೇಶಸ್ಥ ಸಮಾಜವನ್ನು ಸಂಘಟಿಸುವ ಬಗ್ಗೆ ಆಶಯ ಭಾಷಣ ಮಾಡಿದರು.ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ನಿರೂಪಿಸಿದರು. ಶಿವಾನಂದ ಪ್ರಭು ವಂದಿಸಿದರು.
ಪೂರ್ವಾಹ್ನ ಗಣಪತಿ ಹೋಮ , ಪ್ರಾತಃ ಪೂಜೆ, ಪ್ರಾತಃ ಬಲಿ, ರಥ ಕಲಶ ಪೂಜೆ, ನವಕ ಪ್ರಧಾನ ನಡೆಯಿತು. ಆ ಬಳಿಕ ದೇವರ ಬಲಿ ಉತ್ಸವ , ದರ್ಶನ ಬಲಿ, ಬಟ್ಟಲು ಕಾಣಿಕೆ, ರಥ ಕಲಶಾಭಿಶೇಕ ನೆರವೇರಿತು. ರಾತ್ರಿ ದಾಬೋಳಿ ಮಠ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೂತನ ಬ್ರಹ್ಮ ರಥ ಸಮರ್ಪಣೆ , ರಥಾರೋಹಣ ನಡೆಯಿತು. ವಿಕಾಸ್ ವಾಲ್‌ವಾಲ್‌ಕರ್ , ಅನಿತಾ ಮತ್ತು ಎಂ.ಪಿ.ಪ್ರಭು ನಾಸಿಕ್, ವಿಜಯ ಮತ್ತು ಶ್ರೀ ಮುಕುಂದ ಪ್ರಭು ಇವರಿಗೆ ಗೌರವ ಸಮರ್ಪಣೆ ಇತ್ತು.
ನೂತನ ನಿರ್ಮಾನ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ಸನ್ಮಾನ ಮಹಾದೇವ ಗಣಪತಿ ಭಜನಾ ಮಂಡಳಿ ದೇಲಂಪುರಿ ವೇಣೂರು ಕುಣಿತ ಭಜನೆ ಇತ್ತು. ಸುಡುಮದ್ದು ಪ್ರದರ್ಶನದೊಂದಿಗೆ ಬ್ರಹ್ಮ ರತೋತ್ಸವ ರಥಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು