ಇತ್ತೀಚಿನ ಸುದ್ದಿ
Kasaragod | ಮಧೂರು ದೇಗುಲದ ಮೂಡಪ್ಪ ಸೇವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ; ವಿನಾಯಕನಿಗೆ ವಿಶೇಷ ಸೇವೆ
05/04/2025, 23:51

ಕಾಸರಗೋಡು(reporterkarnataka.com): ಮಧೂರು ಶ್ರೀ ವಿನಾಯಕ ದೇಗುಲದ ಮೂಡಪ್ಪ ಸೇವೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶನಿವಾರ ಭಾಗವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿದರು.