4:25 AM Saturday14 - March 2026
ಬ್ರೇಕಿಂಗ್ ನ್ಯೂಸ್
ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ

ಇತ್ತೀಚಿನ ಸುದ್ದಿ

ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಬೊಕ್ಕಸವನ್ನು‌ ತುಂಬಿಸುವುದನ್ನು ಬಿಟ್ಟು, ಬಡ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ: ಸವಾದ್ ಸುಳ್ಯ

30/05/2021, 21:39

ಮಂಗಳೂರು(reporterkarnatakanews): ದೇಶದಾದ್ಯಂತ ಕೊರೊನ ಅಟ್ಟಹಾಸ ಮಾನವ ಸಂಕುಲವನ್ನು ತಲ್ಲಣಗೊಳಿಸಿದ್ದರೆ ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಇದರ ಪರಿವೇ ಇಲ್ಲದಂತೆ ವರ್ತಿಸುತ್ತಿದೆ.ಕಳೆದ ಒಂದು ವರ್ಷವಿಡೀ ಕೇವಲ ಆನ್ ಲೈನ್ ಕ್ಲಾಸ್ ನಡೆಸುವ ಮೂಲಕ ಬಡ ಪೋಷಕರ ಹಣವನ್ನು ಸುಲಿಗೆ ಮಾಡಿ ಅವರ ಜೋಳಿಗೆಯನ್ನು ತುಂಬಿಸಿಕೊಂಡರು.ಫೀಸ್ ಕಟ್ಟದವರನ್ನು ಆನ್ ಲೈನ್ ಕ್ಲಾಸ್ ಗಳಿಗೆ ಕೂಡ ತೆಗೆಯುತ್ತಿಲ್ಲ, ಆದರೆ ಈ ಬಡ ಪೋಷಕರು ಈ ಹಣವನ್ನು ಎಲ್ಲಿಂದ ಭರಿಸುವರೆಂದು ತಿಳಿದುಕೊಳ್ಳುವ ಒಂದು ಸಣ್ಣ ಮನಸ್ಸನ್ನು ಕೂಡ ಇವರು ತೋರಲಿಲ್ಲ. ಇದೀಗ ಕೋವಿಡ್ ಎರಡನೆಯ ಅಲೆ ಲಕ್ಷಾಂತರ ಮನುಷ್ಯ ಜೀವದ ಪ್ರಾಣವನ್ನೇ ತೆಗೆದಿದ್ದರೆ, ಈ ಖಾಸಗಿ ಶಾಲೆಗಳು ಮತ್ತೊಮ್ಮೆ ತಮ್ಮ ಬೊಕ್ಕಸ ತುಂಬಿಸುವ ಪ್ರವೃತಿಯನ್ನು ಪ್ರಾರಂಭಿಸಿದೆ. ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದರೂ, ಮತ್ತೊಮ್ಮೆ ಆನ್ ಲೈನ್ ಕ್ಲಾಸ್ ಎಂಬ ಸಮಜಾಯಿಷಿ ನೀಡಿ, ಶಾಲೆಯ ಫೀಸು ಕಟ್ಟಲು ಮೊಬೈಲ್ ಗಳಲ್ಲಿ ಟೆಕ್ಸ್ಟ್ ಮೆಸೇಜ್ ಗಳ ಯುದ್ಧವನ್ನು ಆರಂಭಿಸಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದ ಪರಿಸ್ಥಿತಿ ಈ ಕೊರೊನ ಕಾಲದಲ್ಲಿ ಅರಿತವರಿಗೆ ‌ಗೊತ್ತು.ವ್ಯಾಪಾರ,‌ ವ್ಯವಹಾರ ಇಲ್ಲ. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಈ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಳುಹಿಸುವ ಶಿಕ್ಷಣ ಸಂಸ್ಥೆಗಳ ಫೀಸು, ಡೊನೇಷನ್ ಕಟ್ಟಲು ಸಾದ್ಯವೇ?. ಹಲವಾರು ‌ಶಿಕ್ಷಣ ಸಂಸ್ಥೆಗಳು ಹೆಚ್ಚಿನ ವರಮಾನ ತರುವ ಸಂಸ್ಥೆ ಗಳನ್ನು ಹೊಂದಿರುವ ಮ್ಯಾನೇಜ್ ಮೆಂಟ್ ಗೆ ಪ್ರಸ್ತುತ ಸಂದರ್ಭದಲ್ಲಿ ತಮ್ಮ ಒಂದು ವರ್ಷದ ಫೀಸ್ ನ್ನು ಮನ್ನಾ ಮಾಡುವ ಸಹ್ರೃದಯ ಇಲ್ಲದೇ ಹೋದದ್ದು ವಿಪರ್ಯಾಸವೇ ಸರಿ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು, ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಆಗ್ರಹಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು