ಇತ್ತೀಚಿನ ಸುದ್ದಿ
ಖಾಸಗಿ ಲೇಔಟ್ ನಿರ್ಮಾಣ ಕಾಮಗಾರಿ: ಚಿಟ್ಟೇಬೈಲು ಕ್ರಿಕೆಟ್ ಮೈದಾನ ಬಳಿ ಘನತ್ಯಾಜ್ಯ ರಾಶಿ!
12/11/2024, 00:14
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ತಾಲೂಕಿನ ಹೊದಲ-ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿತ್ತಿನಗದ್ದೆ ಚಿಟ್ಟೇಬೈಲು ಮಧ್ಯದಲ್ಲಿ ಸಾಂಬಾ ಸದಾಶಿವ ದೇವಸ್ಥಾನದ ಪಕ್ಕ ಪ್ರಜ್ಞಾ ಭಾರತಿ ಶಾಲೆಯ ಎದುರು ಖಾಸಗಿ ಲೇಔಟ್ ನಿರ್ಮಿಸುತ್ತಿದ್ದು, ಈ ಖಾಸಗಿ ಲೇಔಟ್‌ನ್ನು ಜೆಸಿಬಿಯಿಂದ ಸಮತಟ್ಟು ಮಾಡುವ ಸಂದರ್ಭದಲ್ಲಿ ಮರದ ಮುಂಡು, ಮಣ್ಣು, ಕಸಕಡ್ಡಿ ಇನ್ನಿತರ ಅನುಪಯುಕ್ತ ವಸ್ತುಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಚಿಟ್ಟೇಬೈಲು ಸಮೀಪ ಕ್ರಿಕೆಟ್ ಮೈದಾನದ ಪಕ್ಕದಲ್ಲಿ ಹಾಕುತ್ತಿದ್ದು ಇದರಿಂದ ಅಕ್ಕಪಕ್ಕದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಕಸ ಹಾಕಿದ ಜಾಗವು ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಮಾಹಿತಿಯೂ ಕೂಡ ಲಭ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ರಾಶಿ ರಾಶಿ ಘನತ್ಯಾಜ್ಯವನ್ನು ಹಾಕುತ್ತಿರುವುದನ್ನು ತಡೆಯುವಂತೆ ಹಾಗೂ ಸೂಕ್ತ ಕ್ರಮ ಜರುಗಿಸುವಂತೆ ಚಿಟ್ಟೇಬೈಲು ಅಕ್ಕಪಕ್ಕದ ಸಾರ್ವಜನಿಕರು ಒತ್ತಾಯಿಸಿದ್ದಾರೆ.