2:08 PM Tuesday16 - December 2025
ಬ್ರೇಕಿಂಗ್ ನ್ಯೂಸ್
ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್

ಇತ್ತೀಚಿನ ಸುದ್ದಿ

ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯ ಚಾಲನೆ: ಫೀಲ್ಡಿಗಿಳಿದ ಡಿಸಿಪಿ ; ಹ್ಯಾಟ್ಸಾಪ್ ಡೆಪ್ಯುಟಿ ಪೊಲೀಸ್ ಕಮಿಷನರ್ ದಿನೇಶ್ ಕುಮಾರ್

27/03/2023, 13:20

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.ಕಾಂ

ದಿನಾ ಬೆಳಗಾದರೆ ಒಂದಲ್ಲ ಒಂದು ಆಕ್ಸಿಡೆಂಟ್ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಡಲನಗರಿ ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜತೆಗೆ ಖಾಸಗಿ ಬಸ್ ಗಳ ನಿಯಮ ಮೀರಿದ ಚಾಲನೆ ಹೆಚ್ಚಾಗುತ್ತಿದೆ. ಇವೆಲ್ಲದರ ಜತೆಗೆ ಕರ್ಕಶ ಹಾರ್ನ್ ಹಾವಳಿ ಮಿತಿ ಮೀರಿದೆ.



ನಗರದ ನಂತೂರು ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಟಿಪ್ಪರ್ ಲಾರಿ ಚಾಲಕನ ಅಟ್ಟಹಾಸ ಬಲಿಯಾದ ಬೆನ್ನಲ್ಲೇ ಬೆಂದೂರ್ ವೆಲ್ ಬಳಿ ಹಿಂಭಾಗದಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದು ಸಾವು ಸಂಭವಿಸಿತ್ತು. ಈ ಎರಡು ಪ್ರತ್ಯೇಕ ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಮಂದಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಕಂದಮ್ಮಗಳಾಗಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಟ್ರಾಫಿಕ್ ವ್ಯವಸ್ಥೆಯನ್ನು ಇನ್ನಷ್ಡು ಬಲಪಡಿಸುವ ಅಗತ್ಯವಿದೆ ಎಂದು ಮಂಗಳೂರಿನ ನಾಗರಿಕರು ಹೇಳುತ್ತಾರೆ.
ಕರ್ಕಶ ಹಾರ್ನ್ ಕೂಡ ಅಪಘಾತಕ್ಕೆ ಕಾರಣವಾಗುತ್ತದೆ ಎಂಬುದನ್ನು ಟ್ರಾಫಿಕ್ ಪೊಲೀಸರು ತಿಳಿದುಕೊಳ್ಳಬೇಕಾಗುತ್ತದೆ. ಬದಿಯಿಂದ ಸಾಗುವ ದ್ವಿಚಕ್ರ ವಾಹನಗಳ ಚಾಲಕರು ಏಕ್ ದಂ ಸೌಂಡ್ ಹೊರಸೂಸುವ ಕರ್ಕಶ ಹಾರ್ನ್ ಗೆ ಒಮ್ಮೆ ಲೇ ಬೆಚ್ಚಿ ಬೀಳುತ್ತಾರೆ. ಇದರಿಂದ ಅಪಘಾತವಾಗುವ ಸಾಧ್ಯತೆಗಳು ಬಹಳ ಜಾಸ್ತಿ. ಇಷ್ಟೇ ಅಲ್ಲದೆ ಶಬ್ಧ ಮಾಲಿನ್ಯಕ್ಕೂ ಇದು ಕಾರಣವಾಗುತ್ತದೆ. ಮಂಗಳೂರಿನ ಹೃದಯಭಾಗದಲ್ಲಿರುವ ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಮಂಗಳೂರು ವಿವಿ ಕಾಲೇಜು, ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ಕೂಡ ಇದರಿಂದ ತೊಂದರೆಯಾಗುತ್ತದೆ. ಈ ಹಿಂದೆ ನಟರಾಜ್ ಅವರು ಎಸಿಪಿ ಆಗಿದ್ದಾಗ ಕರ್ಕಶ ಹಾರ್ನ್ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಸ್ವಂತ ಅವರೇ ಫಿಲ್ಡಿಗಳಿಯುತ್ತಿದ್ದರು. ಚಾಲಕರಿಗೆ ಶಿಬಿರ ನಡೆಸಿ ನೀತಿ ಪಾಠ ಮಾಡುವ ಮೂಲಕ ಅವರ
ಮನ ಪರಿವರ್ತನೆಯ ಕೆಲಸ ಮಾಡುತ್ತಿದ್ದರು.


ಆದರೆ ಈಗಿನ ಎಸಿಪಿ ಗೀತಾ ಕುಲಕರ್ಣಿ ಅವರು ಫೀಲ್ಡ್ ನಲ್ಲಿ ಕಾಣಸಿಗುವುದು ಬಹಳ ಕಡಿಮೆ ಎಂದು ನಾಗರಿಕರು ದೂರುತ್ತಾರೆ. ಗೀತಾ ಕುಲಕರ್ಣಿ ಅವರು ಇನ್ಸ್ ಪೆಕ್ಟರ್ ಗಳ ಮೂಲಕ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಸ್ ಚಾಲಕರು ಇವರನ್ನು ಕ್ಯಾರೇ ಮಾಡುವುದಿಲ್ಲ. ಇದರಿಂದ ಟ್ರಾಫಿಕ್ ವ್ಯವಸ್ಥೆ ಇತ್ತೀಚಿಗಿನ ದಿನಗಳಲ್ಲಿ ಮತ್ತಷ್ಟು ಹದಗೆಟ್ಟಿದೆ. ಸಾವುಗಳು ಸಂಭವಿಸುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ‌. ಎಸಿಪಿ ಗೀತಾ ಕುಲಕರ್ಣಿ ಅವರು ಫೀಲ್ಡಿಗಿಳಿಯದಿದ್ದರೂ ಈಗಿನ ಕಾನೂನು ಸುವ್ಯವಸ್ಥೆಯ ಡಿಸಿಪಿ ದಿನೇಶ್ ಕುಮಾರ್ ಅವರು ತುಂಬಾ ಸೂಕ್ಷ್ಮ ಇದ್ದಾರೆ. ಅವರು ತನ್ನ ವಾಹನದಲ್ಲಿ ಸಂಚರಿಸುತ್ತಿದ್ದ ಹಾಗೆ ಸುತ್ತಮುತ್ತಲಿನ ವಾಹನಗಳ ಚಾಲನೆಯ ಬಗ್ಗೆ ಕಣ್ಣಿಟ್ಟಿರುತ್ತಾರೆ. ಇದರ ಫಲಶೃತಿ ಎಂಬಂತೆ ಇವತ್ತು ಬೆಳಗ್ಗೆ ಮಿಲಾಗ್ರಿಸ್ ಸಿಗ್ನಲ್ ಬಳಿ ಡಿಸಿಪಿ ದಿನೇಶ್ ಕುಮಾರ್ ಕಾರ್ಯಾಚರಣೆಗೆ ಇಳಿದಿದ್ದರು.ಖಾಸಗಿ ಎಕ್ಸ್ ಪ್ರೆಸ್ ಬಸ್ಸನ್ನು ತಡೆದು ನಿಲ್ಲಿಸಿ ವಾಹನ ಚಾಲನೆ ಬಗ್ಗೆ ಚಾಲಕರಿಗೆ ತಿಳಿ ಹೇಳಿ, ನವಿರಾದ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಿಜಕ್ಕೂ ಇದು ಎಸಿಪಿ ಗೀತಾ ಕುಲಕರ್ಣಿ ಅವರು ಮಾಡಬೇಕಾದ ಕೆಲಸ ಆಗಿದೆ. ಆದರೆ ದಿನೇಶ್ ಅವರು ಮಾಡಿದ್ದಾರೆ. ನಿಜಕ್ಕೂ ದಿನೇಶ್ ಕುಮಾರ್ ಅವರಿಗೆ ಹ್ಯಾಟ್ಸಾಪ್.

ಇತ್ತೀಚಿನ ಸುದ್ದಿ

ಜಾಹೀರಾತು