2:22 AM Sunday19 - April 2026
ಬ್ರೇಕಿಂಗ್ ನ್ಯೂಸ್
ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕಸ ವಿಲೇವಾರಿ ವಾಹನ ಬಂದಿಲ್ಲವೆಂದು ಆರೋಪಿಸಿ ಗ್ರಾಮ ಪಂಚಾಯತ್ ಕಚೇರಿ ಬಳಿ ಕಸ ಚೀಲವಿಟ್ಟ ಭೂಪ: ಗ್ರಾಮಸ್ಥರ ಆಕ್ರೋಶ

05/09/2024, 15:31

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನ ಸಮಯಕ್ಕೆ ಸರಿಯಾಗಿ ಬಂದಿಲ್ಲವೆಂದು ಮನೆಯ ಕಸವನ್ನು ಗ್ರಾಮ ಪಂಚಾಯತ್ ಬಾಗಿಲ ಬಳಿ ಇಟ್ಟ ಘಟನೆ ಬಣಕಲ್ ಗ್ರಾಮ ಪಂಚಾಯತ್ ಯಲ್ಲಿ ನಡೆದಿದೆ.


ಗ್ರಾಮ ಪಂಚಾಯಿತಿಯ ವಾಹನ ದಿನಕ್ಕೆ ಎರಡು ಬಾರಿ ಬರುತ್ತಿದ್ದು ಮನೆ ಮಾಲೀಕರು ವಾಹನ ಬಂದ ಸಮಯಕ್ಕೆ ಸರಿಯಾಗಿ ಬಾರದೆ ಈ ರೀತಿ ಕೃತ್ಯ ವ್ಯಸಗಿದ್ದಾರೆವೆಂದು ಸಮಾಜ ಸೇವಕ ಆರಿಫ್ ಆರೋಪಿಸಿದ್ದಾರೆ. ಬಣಕಲ್ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನಕ್ಕೆ ಚಾಲಕರಿಲ್ಲದೆ ಸಮಾಜ ಸೇವಕ ಆರೀಫ್ ಅವರೇ ಸಮಾಜ ಸೇವೆಯ ದೃಷ್ಟಿಯಿಂದ ಕಸ ವಿಲೇವಾರಿ ವಾಹನವನ್ನು ಚಲಾಯಿಸುತ್ತಿದ್ದು ಇವರು ದಿನಕ್ಕೆ ಎರಡು ಬಾರಿ ಬಂದರು ಈ ವ್ಯಕ್ತಿ ಮಾತ್ರ ಈ ರೀತಿ ಮಾಡಿರುವುದು ಗ್ರಾಮಸ್ಥರಿಲ್ಲರಿಗೂ ಬೇಸರ ತರಿಸಿದೆ ಎಂದು ಗ್ರಾಮಸ್ಥರಾದ ಗಂಗು ಅಸಮಾಧಾನ ಹೊರಹಾಕಿದರು. ಆರೀಫ್ ಅವರಿಗೆ ಫೋನ್ ಮಾಡಿ ಹೇಳಿದ್ದರೆ ಮರುದಿನ ಕಸವನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು. ಈ ರೀತಿ ಮಾಡಿರುವುದು ಸರಿಯಲ್ಲ ಎಂದರು.
ಕಸದ ಚೀಲವಿಟ್ಟ ಮಣಿಕಂಠ ಮಾತಾಡಿ, ನಮ್ಮ ಮನೆ ಸಮೀಪ ಕಸ ವಿಲೇವಾರಿ ವಾಹನ ನಿಲ್ಲಿಸದೆ ಹೋಗಿದ್ದರಿಂದ ನಾನು ಗ್ರಾಮ ಪಂಚಾಯತ್ ಎದುರಿಗೆ ಕಸವನ್ನು ಹಾಕಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು