ಇತ್ತೀಚಿನ ಸುದ್ದಿ
ಕಾರ್ಯಕರ್ತನ ತಲೆಗೆ ಹೊಡೆದ ಡಿಕೆಶಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಏನು ಹೇಳಿದ್ರು ಗೊತ್ತೇ?
11/07/2021, 17:16
ಮಂಗಳೂರು(reporterkarnataka news): ಕಾರ್ಯಕರ್ತನ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡತೆ ಸರಿಯಲ್ಲ. ಕಾಂಗ್ರೆಸ್ ಸಂಸ್ಕೃತಿ ಏನು ಅನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರುಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ರೌಡಿಗಳ ಪಕ್ಷ ಅಲ್ಲ ಅಂತ ಯಾರೂ ಹೇಳಲ್ಲ, ಅವರ ವ್ಯಕ್ತಿತ್ವದಲ್ಲೇ ಅದು ಕಾಣುತ್ತದೆ. ಅವರ ಇತಿಹಾಸ ತೆಗೆದು ನೋಡಿದ್ರೆ ರೌಡಿ ಮಾತ್ರವಲ್ಲ, ಈ ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಪ್ರೇರಣೆ ಅವರೇ ಎಂದರು.
ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು, ಯಾರ ಬಗ್ಗೆಯೂ ವೈಯಕ್ತಿಯವಾಗಿ ಮಾತನಾಡಲ್ಲ. ಆದ್ರೆ ಸಮಾಜ ನಮ್ಮನ್ನ ಗಮನಿಸುತ್ತಿರುತ್ತದೆ. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ. ಆಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರೋದು ನಮ್ಮ ಸಂಸ್ಕೃತಿ. ಯಾರೇ ರಾಜಕಾರಣಿ ಆದ್ರೂ ಎಲ್ಲೆ ಮೀರಿ ವರ್ತಿಸಬಾರದು ಎಂದು ಅವರು ನುಡಿದರು.
ಇನ್ನು ವಿಧಾನಸೌಧದ ಒಳಗೆ ಸಿದ್ದರಾಮಯ್ಯ ಅವರು ತೊಡೆ ತಟ್ಟಿ ಯುದ್ದಕ್ಕೆ ಕರೆದು ಒಳಹೊಕ್ಕಿದವರು. ದೇವಸ್ಥಾನದ ಆಗಿರುವ ವಿಧಾನಸೌಧಕ್ಕೆ ಅಗೌರವ ತೋರಿದವರು ಕಾರ್ಯಕರ್ತರಿಗೆ ಗೌರವ ತೋರಿಸ್ತಾರಾ..? ಎಂದು ನಳಿನ್ ಪ್ರಶ್ನಿಸಿದರು.