6:52 AM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಕರೋಕಿ ಇಲ್ಲದ ಲೈವ್ ಆರ್ಕೆಸ್ಟ್ರಾ: ಮಲೆನಾಡಿನ ಅಂಧ ಗಾಯಕರಿಗೆ ಕಡಲನಗರಿ ಫಿದಾ!

13/10/2022, 21:21

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅದೊಂದು ಲೈವ್ ಆರ್ಕೆಸ್ಟ್ರಾ… ಕ್ಯಾಸೆಟ್ ಇಲ್ಲ, ಕರೋಕಿ ಇಲ್ಲ. ಆಧುನಿಕ ಸಂಗೀತ ಸಲಕರಣೆಗಳಿಲ್ಲ. ಕೀ ಬೋರ್ಡ್ ಬಿಟ್ಟರೆ ಎಲ್ಲ ಸಾಂಪ್ರದಾಯಿಕ ಸಂಗೀತ ಸಾಧನ ಬಳಸಿ ರಸಮಂಜರಿ ಉಣ ಬಡಿಸಲಾಗುತ್ತಿತ್ತು. ಹಾಗೆಂತ ಸೆಲೆಬ್ರಿಟಿ ಗಳು, ಮರಿ ಸೆಲೆಬ್ರಿಟಿ ಗಳು ಯಾರೂ ಇಲ್ಲ. ಅವರೆಲ್ಲ ಸಾಮಾನ್ಯ ಹಾಡುಗಾರರು. ಅದೂ ಕೂಡ ಕಣ್ಣು ಕಾಣದ ಅಂಧ ಗಾಯಕರು!

ಇದೆಲ್ಲ ನಡೆದದ್ದು ಕಡಲನಗರಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ 45 ನಂಬರ್ ಸಿಟಿ ಬಸ್ ನಿಲ್ಲುವ ಜಾಗದ ಪಕ್ಕದಲ್ಲಿ. ಬಸ್ ತಂಗುದಾಣದ ಪಕ್ಕದಲ್ಲಿರುವ ತ್ರಿಕೋನಾಕಾರದ ಪುಟ್ಟ ಜಾಗದಲ್ಲಿ ಒಂದು ಸಣ್ಣ ಸೆಟ್ ಅಪ್ ಮಾಡಿಕೊಂಡು ಅಲ್ಲೇ ಒಂದು ಸಣ್ಣ ವೇದಿಕೆ ನಿರ್ಮಿಸಿ, ದೊಡ್ಡ ಎರಡು ಸೌಂಡ್ ಬಾಕ್ಸ್ ಅಳವಡಿಸಿ ಹಿತವಾದ, ಮಿತವಾದ ಧ್ವನಿಯಲ್ಲಿ ರಸಮಂಜರಿ ನಡೆಯುತ್ತಿತ್ತು. ಇದನ್ನು ನಡೆಸುತ್ತಿದ್ದ ತಂಡ ನಮ್ಮ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಕಾಂಚಿ ನಗರದ ಆಶ್ರಯ ಕಾಲೊನಿಯ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಭಾದ ಕಲಾವಿದವರು. ವಿಶೇಷವೆಂದರೆ ಗಾಯಕರು, ಪಕ್ಕ ವಾದ್ಯದವರೆಲ್ಲ ಅಂಧರು. ಗಾಯಕರೊಬ್ಬರು ಕಾರ್ಯಕ್ರಮ ನಿರೂಪಿಸುವುದರ ಜತೆಗೆ ಮದ್ದಲೆ ನುಡಿಸುತ್ತಿದ್ದರು. ವಾದ್ಯ ಸಂಗೀತ ನುಡಿಸುತ್ತಿದ್ದವರೆಲ್ಲ ಗಾಯಕರೂ ಕೂಡ ಆಗಿದ್ದರು.

ಸಂಜೆ ಸುಮಾರು 4 ಗಂಟೆಯ ವೇಳೆಗೆ ಗಾನಸುಧೆ ಹರಿಯಲಾರಂಭಿಸಿತು. ಅಕ್ಕಪಕ್ಕದವರೆಲ್ಲ ಕ್ಷಣ ಮಾತ್ರದಲ್ಲಿ ಅಲ್ಲಿ ಸುತ್ತಮುತ್ತ ನೆರೆದಿದ್ದರು. ಹಾಡು ಕೇಳಿ ಕೆಲವರು ಬಂದ ಕಾರ್ಯವನ್ನೇ ಮರೆತಂತೆ ಕಂಡು ಬಂತು. ಇನ್ನೂ ಕೆಲವರು ಮೊಬೈಲ್ ಹೊರತೆಗೆದು ವೀಡಿಯೊ ಮಾಡಲಾರಂಭಿಸಿದರು. ಮತ್ತೆ ಕೆಲವರು ಫೋಟೋ ಕ್ಲಿಕ್ಕಿಸಲಾರಂಭಿಸಿದರು.
ಸಿನಿಮಾ ಹಾಡು, ಭಕ್ತಿಗೀತೆ, ಜನಪದ ಗೀತೆ, ತುಳು ಹಾಡುಗಳು ವಿವಿಧ ಗಾಯಕರಿಂದ ಅಲೆ ಅಲೆಯಾಗಿ ಹರಿಯಲಾರಂಭಿಸಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬೊಂಬೆ ಹೇಳುತ್ತೈತೆ ಎಂಬ ಹಾಡು ಅಂಧ ಗಾಯಕರೊಬ್ಬರ ಕಂಠದಿಂದ ಹೊರ ಹೊಮ್ಮುತ್ತಿದ್ದಂತೆ ಅಲ್ಲಿ ನೆರೆದವರೆಲ್ಲ ಅಕ್ಷರಶಃ ಭಾವಪರವಶರಾದರು. ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ವೃದ್ಧರೊಬ್ಬರು 10 ರೂಪಾಯಿಯ ನೋಟು ತಂದು ಕಲಾವಿದರ ಮುಂದಿಟ್ಟ ಡಬ್ಬದೊಳಗೆ ತುರುಕುವ ದೃಶ್ಯವಂತು ಒಂದು ಕ್ಷಣ ಎಂಥಹ ಕಲ್ಲು ಹೃದಯವನ್ನಾದರೂ ಕರಗಿಸುವಂತಿತ್ತು. ನಂತರ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು ಹೊರಹೊಮ್ಮಿತು.


ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು, ಸಿಟಿ ಬಸ್ ಡ್ರೈವರ್ ಗಳು, ಕಂಡೆಕ್ಟರ್ ಗಳು, ಕೈಯಲ್ಲಿ ಚೀಲ ಹಿಡಿದರು, ಫೈಲ್ ಹಿಡಿದವರು ತಮ್ಮ ಶಕ್ತಿಗೆ ಅನುಸಾರವಾಗಿ ತಮ್ಮ ಆರ್ಥಿಕ ಸಹಾಯವನ್ನು ಆ ಪುಟ್ಟ ಡಬ್ಬದೊಳಗೆ ತುರುಕುತ್ತಿದ್ದರು. ಕಡಲನಗರಿಯಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು. ಡಬ್ಬದೊಳಗೆ ಹಣ ತುರುಕಿದವರು ಮಾತ್ರ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮ ವರ್ಗದವರಾಗಿದ್ದರು. ವಿಲಾಸಿ ಕಾರಿನಲ್ಲಿ ಬಂದವರು ಮಾತ್ರ ಇತ್ತ ಕಣ್ಣೆತ್ತಿಯೂ ನೋಡದೆ ತೆರಳುತ್ತಿರುವುದು ಕಂಡು ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು